

ಬಳ್ಳಾರಿ : ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನ ನೀಡಿದ್ದು, ಸದುಪಯೋಗ ಪಡೆಸಿಕೊಂಡು ಕ.ಕ ಭಾಗ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ದೂರಗೊಳಿಸೋಣ ಎಂದು ಡಿಎಚ್‌ಒ ಡಾ. ವೈ ರಮೇಶ ಬಾಬು ಹೇಳಿದರು.
ನಗರದ ಡಿಎಚ್‌ಒ ಕಚೇರಿಯಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಹಿಂದುಳಿದ ಜಿಲ್ಲೆ ಪ್ರದೇಶವೆಂಬ ಪಟ್ಟಿಯಿಂದ ಹೊರಬರಲು ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳನ್ನು ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಸೌಕರ್ಯ ಒದಗಿಸಲಾಗುತ್ತಿದ್ದು, ಸರಳ ಹೆರಿಗೆ ವ್ಯವಸ್ಥೆಗಾಗಿ ಮನೆಯಿಂದ ಆಸ್ಪತ್ರೆಗೆ ಬರಲು 108 ವಾಹನ, ಆಸ್ಪತ್ರೆಯಲ್ಲಿ ಸುಸಜ್ಜಿತ ಹೆರಿಗೆ ಕೋಣೆ, ವಾರ್ಡ, ಪ್ರಯೋಗಾಲಯ ಸೇವೆ, ಉಚಿತ ಊಟ, ಔಷಢಧಿ, ರಕ್ತ ಮನೆ ಬಿಡಲು ನಗುಮಗು ವಾಹನ ಒದಗಿಸುವಿಕೆ, ಜನನಿ ಸುರಕ್ಷಾ ಯೋಜನೆಯಡಿ ಸಹಾಯಧನ ಅವರ ಖಾತೆಗೆ ಸೌಲಭ್ಯದೊಂದಿಗೆ ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ನಾವೆಲ್ಲರೂ ಕಾಪಾಡಲು ಕೈಜೊಡಿಸೋಣ. ಸಾರ್ವಜನಿಕರು ಆಸ್ಪತ್ರೆಗೆ ಬಂದಾಗ ಸೌಜನ್ಯ ಪೂರ್ವಕವಾಗಿ ಮಾತನಾಡಿಸಿ ರೋಗಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಿ ಸರ್ವರ ಆರೋಗ್ಯ ಸುಧಾರಣೆಗೆ ಎಲ್ಲರೂ ಪಣತೊಡಬೇಕು ಎಂದರು.