ಹಿಂದುಪರ ಸರ್ಕಾರಕ್ಕೆ ಶೇ.100 ಮತದಾನ ಮಾಡಿ

lingaraj appa
Published on

ಕಲಬುರಗಿ: ರಾಮ ಮಂದಿರ ನಿರ್ಮಾಣದಿಂದ ರಾಮ ರಾಜ್ಯ ನಿರ್ಮಾಣಕ್ಕೆ ಸಾಗಬೇಕು. ಭಾರತ ವಿಶ್ವಗುರು ಆಗಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಹಿಂದುಪರ ಸರ್ಕಾರ ಅಧಿಕಾರಕ್ಕೆ ತರಲು ಪ್ರತಿಶತ ಮತದಾನ ಮಾಡಬೇಕು ಎಂದು ವಿಶ್ವ ಹಿಂದು ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪ ಮನವಿ ಮಾಡಿದರು.
ವಿಶ್ವ ಹಿಂದು ಪರಿಷತ್‌ನ ೬೦ನೇ ವಾರ್ಷಿಕೋತ್ಸವ ನಿಮಿತ್ತ ಇಡೀ ವಿಶ್ವ ಹಿಂದು ಪರಿಷತ್ತಿನ ದೇಶದಲ್ಲಿ ಮಾತ್ರವಲ್ಲ, ಜಗತ್ತಿನ ೪೦ ದೇಶಗಳಲ್ಲೂ ಪರಿಷತ್ತಿನ ಕಾರ್ಯ ಬೆಳೆಯುತ್ತಿದೆ. ರಾಷ್ಟçಧರ್ಮ ಪಾಲನೆಗಾಗಿ ವಿಎಚ್‌ಪಿ ಶ್ರಮಿಸುತ್ತಿದ್ದು, ಆದನ್ನು ವಿಸ್ತರಿಸಲು ಯೋಜನೆ ರೂಪಿಸುವ ಜತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು, ಇದರಿಂದ ಇಡೀ ದೇಶದಲ್ಲಿ ಹಿಂದುಗಳ ಸ್ವಾಭಿಮಾನ, ದೇಶಾಭಿವೃದ್ಧಿ ಇಮ್ಮಡಿಯಾಗಿದೆ. ಸಾಧು, ಸಂತರ ಮಾರ್ಗದರ್ಶನದಲ್ಲಿ ವಿಎಚ್‌ಪಿ ಕಾರ್ಯನಿರ್ವಹಿಸುತ್ತಿದೆ. ಲವ್ ಜಿಹಾದ್, ಗೋಹತ್ಯೆ ಸೇರಿ ಮುಂತಾದ ಸಮಸ್ಯೆಗಳನ್ನು ನೀಗಿಸಲು ಹೋರಾಡುತ್ತಿದೆ. ಗೋವುಗಳನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಶಿವಕುಮಾರ ಬೋಳಶೆಟ್ಟಿ, ರಾಜು ನವಲದಿ, ಶಿವರಾಜ ಸಂಗೋಳಗಿ, ಅಶ್ವಿನಕುಮಾರ ಇತರರಿದ್ದರು.

ರಾಷ್ಟ್ರಾಭಿವೃದ್ಧಿ ಪಂಚಸೂತ್ರ: ಸಮಾಜದಲ್ಲಿ ಪ್ರಮುಖವಾಗಿ ಐದು ಪರಿವರ್ತನೆಗಳಾಗಬೇಕಿದೆ. ದೇಶದಲ್ಲಿ ಅವಿಭಕ್ತ ಕುಟುಂಬಗಳು ಗಟ್ಟಿಗೊಳ್ಳಬೇಕು, ಕುಟುಂಬಗಳ ರಕ್ಷಣೆ ಆಗಬೇಕು, ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿಯತೆ, ಅಸ್ಪೃಶ್ಯತೆ ನೀಗಿಸಿ, ಹಿಂದುಗಳೆಲ್ಲರೂ ಒಂದೇ ಎನ್ನುವ ಭಾವ ಬರಬೇಕು, ಸ್ವದೇಶಿ ಸಂಸ್ಕೃತಿ, ವೇಷ, ಸಂಪ್ರದಾಯದ ಜಾಗೃತಿ ಮೂಡಿ, ವಿದೇಶಿ ವ್ಯಾಮೋಹ ದೂರಾಗಬೇಕು, ಪರಿಸರ ಸಂರಕ್ಷಣೆ, ಪ್ರಕೃತಿ ನಾಶವಾಗದಂತೆ ತಡೆಯಬೇಕು, ಪೌರತ್ವ ಜಾಗೃತಿ ಮೂಡಿಸಿ, ದೇಶದ ಬಗ್ಗೆ ಹೆಮ್ಮೆ ಮೂಡಿಸುವ ಜತೆಗೆ ತೆರಿಗೆ ಕಟ್ಟುವುದು ನಮ್ಮ ಕರ್ತವ್ಯ ಎಂಬ ಭಾವ ಮೂಡಿಸಬೇಕು ಎಂದು ಲಿಂಗರಾಜ ಅಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net