

ಗದಗ: ದೇಶದಲ್ಲಿ ಮಾತ್ರವಲ್ಲ, ವಿಶ್ವದಲ್ಲಿ ಹಿಂದುಗಳಿಗೆ ಆಶ್ರಯ ಮತ್ತು ರಕ್ಷಣೆ ಅವಶ್ಯವಾಗಿದೆ. ಈ ಕಾರ್ಯದಲ್ಲಿ ಧರ್ವಧಿಕಾರಿಗಳು, ಮಠಾಧೀಶರ ಸಹಕಾರ ಮತ್ತು ಪಾತ್ರ ಮುಖ್ಯವಾಗಿದೆ ಎಂದು ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ ಪರಾಂಡೆ ಹೇಳಿದರು.
ನಗರದ ಶಿವಾನಂದ ಮಠದಲ್ಲಿ ಅಭಿನವ ಶಿವಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ನಂತರ ಅವರು ಮಾತನಾಡಿದರು.
ಹಿಂದು ಧರ್ಮದ ರಕ್ಷಣೆಗಾಗಿ ಒಳ ಪಂಗಡಗಳ ಭಿನ್ನಾಭಿಪ್ರಾಯ ಶಮನಗೊಳಿಸಬೇಕಿದೆ. ಹಿಂದುತ್ವ ಮತ್ತು ರಾಷ್ಟ್ರೀಯತೆಯನ್ನು ಯುವ ಪೀಳಿಗೆಯಲ್ಲಿ ಬೆಳೆಸುವುದಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದರು.
ಹಿಂದು ವಿರೋಧಿ ಆಯುಧಗಳಾದ ಲವ್ಜಿಹಾದ್, ಉಗ್ರವಾದ, ರಾಷ್ಟ್ರ ವಿರೋಧಿ ಚಟುವಟಿಕೆಗಳ ವಿರುದ್ಧ ಹಿಂದು ಧರ್ಮ ರಕ್ಷಣೆ, ಸಂಸ್ಕೃತಿ, ಸಂಸ್ಕಾರ ಜತೆಗೆ ಭಾರತೀಯತೆ ಬಗ್ಗೆ ಜಾಗೃತಿಗಾಗಿ ಧರ್ಮ-ಸಂಸತ್ತು ಕಾರ್ಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಶ್ರೀಗಳು ಈ ದಿಶೆಯಲ್ಲಿ ನಮ್ಮ ಸಹಯೋಗ ಇದೆ. ಇದು ನಮ್ಮ ಜವಾಬ್ದಾರಿ ಕೂಡ ಎಂದು ಹೇಳಿದರು.
ಮಿಲಿಂದ ಪರಾಂಡೆ, ವಿಎಚ್ಪಿ ಜಂಟಿ ಕಾರ್ಯದರ್ಶಿ ಕೋಟೇಶ್ವರ ಶರ್ಮಾ ಅವರನ್ನು ಸನ್ಮಾನಿಸಲಾಯಿತು. ಪರಿಷತ್ನ ಪ್ರಲ್ಹಾದ ಇನಾಮದಾರ, ಕೋಶಾಧ್ಯಕ್ಷ ಮಾರುತಿ ಪವಾರ, ಜಿಲ್ಲಾ ಸಹಕಾರ್ಯದರ್ಶಿ ರಾಘವೇಂದ್ರ ಹಬೀಬ, ಜಿಲ್ಲಾ ಧರ್ವಚಾರ್ಯ ಪ್ರಮುಖ ಈರಣ್ಣ ಹೇಮಾದ್ರಿ, ಆರ್.ಎಸ್.ಎಸ್. ಸಂಘ ಸಂಚಾಲಕರಾದ ಬಸವರಾಜ ನಾಗಲಾಪೂರ, ಗೋವರ್ಧನರಾವ, ಬೆಟಗೇರಿ ಸಹ ಸಂಯೋಜಕ ಸ್ವರೂಪ ಹುಬ್ಬಳ್ಳಿ, ಗಣೇಶ ಲದ್ವಾ ಉಪಸ್ಥಿತರಿದ್ದರು.