ಹಿಂದುಗಳ ಹತ್ಯೆ ಖಂಡಿಸಿ ಪ್ರತಿಭಟನೆ

MDG MANAVI
Published on

ಮುಂಡರಗಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ಲ್ಲಿ ನಡೆದ ಭಯೋತ್ಪಾದನೆ, ಹಿಂದುಗಳ ಹತ್ಯೆ ಖಂಡಿಸಿ ತಾಲೂಕು ಕನ್ನಡ ಕ್ರಾಂತಿಸೇನೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಲಾಯಿತು.

ಹಿಂದು ಪ್ರಮುಖ ಮಂಜುನಾಥ ಇಟಗಿ ಮಾತನಾಡಿ, ಕಾಶ್ಮೀರದ ಪಹಲ್ಗಾಮ್ಲ್ಲಿ 26 ಭಾರತೀಯರ ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದಕರ ಕೃತ್ಯ ಖಂಡನೀಯ. ಭಾರತ ದೇಶವನ್ನು ಅಭದ್ರಗೊಳಿಸಲು ಇಂತಹ ಕುಕೃತ್ಯವನ್ನು ಮಾಡಲಾಗಿದೆ. ಭಯೋತ್ಪಾದಕರ ದಾಳಿಯನ್ನು ಕೇಂದ್ರ ಸರ್ಕಾರ ಗಟ್ಟಿ ನಿರ್ಧಾರದ ಮೂಲಕ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕು. ಮತ್ತೊಮ್ಮೆ ಇಂತಹ ಹೀನ ಕೃತ್ಯ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಮುಖ್ಯಶಿಕ್ಷಕ ಎಸ್.ಆರ್. ರಿತ್ತಿ ಮಾತನಾಡಿ, ಧರ್ಮ ಮತಾಂಧರು ನೀಚ ಕೆಲಸ ಮಾಡುತ್ತಿದ್ದಾರೆ. ಆ ಧರ್ಮದ ಗುರುಗಳು, ಹಿರಿಯರನ್ನು ಅವರನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಕನ್ನಡ ಕ್ರಾಂತಿಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಮುಧೋಳ, ಗ್ರಾಪಂ ಮಾಜಿ ಸದಸ್ಯ ದೇವು ಹಡಪದ ಮಾತನಾಡಿದರು. ತಹಸೀಲ್ದಾರ್ ಪರವಾಗಿ ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಮನವಿ ಸ್ವೀಕರಿಸಿದರು.

ಗುರುರಾಜ ಜೋಶಿ, ಶೇಖರಗೌಡ ಪಾಟೀಲ, ಅನಂತ ಚಿತ್ರಗಾರ, ಮಲ್ಲೇಶ ಬಾರಕೇರ, ಶಿವು ನವಲಗುಂದ, ಸಿದ್ದು ದೇಸಾಯಿ, ರಾಮು ಡೊಣ್ಣಿ, ಯಮನಪ್ಪ ಭಜಂತ್ರಿ, ರವಿ ಪಾಟೀಲ, ಅಶೋಕ ಚೂರಿ, ಹನುಮಂತ ಚನ್ನದಾಸರ, ಈರಣ್ಣ ಗಡಾದ, ಮಾರುತಿ ಕಕ್ಕೂರ, ಅಂದಪ್ಪ ಶೀರಿ,ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net