

ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿ ಅಧಿಕಾರಾವಧಿ ಆಗಿರುವ ಅಭಿವೃದ್ಧಿ ಕೆಲಸಗಳ ಸ್ಥಗಿತಕ್ಕೆ ಸೂಚಿಸಿರುವ ಸಿಎಂ ಸಿದ್ದರಾಮಯ್ಯ ಅವರ ನಡೆ ಶೋಭೆ ತರದೆಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ನಾವು ಆಡಳಿತದಲ್ಲಿ ಇದ್ದಾಗ ಸಾರ್ವಜನಿಕ ಕೆಲಸಗಳಿಗೆ ಚಾಲನೆ ನೀಡಲಾಗಿತ್ತೇ ಹೊರ ತು,ಬಿಜೆಪಿ ಶಾಸಕರ ಮನೆ ಕೆಲಸಗಳಿಗೆ ಒಪ್ಪಿಗೆ ನೀಡಿಲ್ಲ ಎಂಬುದನ್ನು ಸಿದ್ದರಾಮಯ್ಯ ಗಮನಿಸ ಬೇಕು. ಬಿಜೆಪಿ ಅಧಿಕಾರಾವಧಿ ರಾಜ್ಯ, ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಅವುಗಳನ್ನು ಕಾಂಗ್ರೆಸ್ ನಿರ್ಲಕ್ಷಿೃಸಿದರೆ ಬಿಜೆಪಿ ಬೀದಿಗಿಳಿಯಲಿದೆ.
ಗ್ಯಾರಂಟಿಗಳಿಗೆ ಮನಸೋತು ಜನ ತಮಗೆ ಬಹುಮತ ನೀಡಿದ್ದಾರೆ. ಭಾಷಣ ಮಾಡುವಾಗ ಇಲ್ಲದ ಷರತ್ತುಗಳು ಈಗ ಯಾಕೆ?ಬಿಟ್ಟಿ ಭಾಗ್ಯಗಳ ಸರದಾರ ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗ್ಯಾರಂಟಿಗಳ ಮೂಲಕ ಜನರಿಗೆ ದ್ರೋಹ ಎಸಗಿದ್ದಾ ರೆ. ಕಾಂಗ್ರೆಸ್ಸಿಗೆ ಮತ ಹಾಕಿರುವವರಂತೂ ಗ್ಯಾರಂಟಿಯಾಗಿ ಕರೆಂಟ್ ಬಿಲ್ ಪಾವತಿಸ ಬಾರದು,ಉಳಿದ ಗ್ಯಾರಂಟಿಗಳ ಜಾರಿಗೆ ಆಗ್ರಹಿಸ ಬೇಕೆಂದರು.
ನಾನಾ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿರುವ ಸಚಿವ ಪ್ರಿಯಾಂಕ ಖರ್ಗೆ ಮತ್ತಿತರ ಕಾಂಗ್ರೆಸ್ ನಾಯಕರ ಹೇಳಿಕೆ ನೋಡಿ ದರೆ,ಇವರಿಗೆ ರಾಜ್ಯದಲ್ಲಿ ಶಾಂತಿ ನೆಲೆಸುವುದು ಬೇಕಿಲ್ಲ ಎಂದು ಕಾಣುತ್ತದೆ. ತಮ್ಮ ಹಿಂದಿನ ಹಾದಿ ನೆನಸಿಕೊಂಡಿರುವ ಶಿವಕುಮಾರ್ ಪೊ ಲೀಸ್ ಅಧಿಕಾರಿಗಳಿಗೆ ಧಮಕಿ ಹಾಕಿದ್ದಾರೆ.ಬಹುಸಂಖ್ಯಾತ ಹಿಂದುಗಳ ಸದ್ದು ಅಡಗಿಸ ಬಹುದೆಂದು ಹೊರಟರೆ ಪರಿಣಾಮ ನೆಟ್ಟಗಿರ ದು.
ಭದ್ರಾ ತ್ವರಿತವಾಗಬೇಕು,ಮೆಡಿಕಲ್‌ಕಾಲೇಜಿಗಾಗಿ ಜಿಆರ್‌ಹಳ್ಳಿ ದಾವಣಗೆರೆ ವಿವಿ ಕಟ್ಟಡಕ್ಕೆ ಅನುಮತಿ,ಕೇಂದ್ರೀಯ ವಿದ್ಯಾ ಲಯ, ನೇರ ರೈಲು ಮಾರ್ಗ ಇತ್ಯಾದಿ ಜಿಲ್ಲೆ ಅಭಿವೃದ್ಧಿ ಕೆಲಸಗಳಡೆ ಗಮನ ಹರಿಸುವಂತೆ ಕಾಂಗ್ರೆಸ್ ಶಾಸಕರಿಗೆ ಸಲಹೆ ನೀಡಿದ ನವೀನ್,ಮಂತ್ರಿಗಿರಿ ಯ ಪರದಾಟ ನೋಡಿದರೆ ಕಾಂಗ್ರೆಸ್ ಶಾಸಕರಿಗೆ ಅಭಿವೃದ್ಧಿ ಬೇಕಿಲ್ಲವೆಂಬುದು ದಿಟವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಕುರಿತು ಜೂನ್ ಮೊದಲ ವಾರದಲ್ಲಿ ಜಿಲ್ಲಾ ಮಟ್ಟದಲ್ಲಿ ಸಭೆಗಳಾಗಲಿವೆ. ತಾಪಂ,ಜಿಪಂ ಹಾಗೂ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಪುಟಿದೇಳಲಿದೆ ಎಂದರು.
ಸಂತೋಷ್ ಹೇಗೆ ಕಾರಣರಾಗುತ್ತಾರೆ?
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‌್ಯದರ್ಶಿ ಬಿ.ಎಲ್.ಸಂತೋಷ್ ಒಬ್ಬರೇ,ಪಕ್ಷದ ಸೋಲಿಗೆ ಹೇಗೆ ಕಾರಣರಾಗುತ್ತಾರೆ. ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದವರು. ಟಿಕೆಟ್ ಹಂಚಿಕೆಯಲ್ಲಿ ಸಾಮೂಹಿಕ ನಿರ್ಧಾರಗಳಾಗಿರುವ ಸಂದರ್ಭದಲ್ಲಿ ಅವರೊಬ್ಬರನ್ನೇ ಹೊಣೆ ಮಾಡುವುದು ಸರಿಯಲ್ಲ.
ನಾಲ್ಕು ಗೋಡೆ ನಡುವಿರಬೇಕು
ಹೊಸದುರ್ಗದಲ್ಲಿ ಪಕ್ಷದ ಸೋಲಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ,ನಾನು ಕಾರಣ ಎಂಬ ಮಾತು ಸರಿಯಲ್ಲ. ನಾನೂ ಕೂಡ ಎಂಎಲ್‌ಸಿ ಎಲೆಕ್ಷನ್‌ನಲ್ಲಿ 2 ಬಾರಿ ಸೋತಿದ್ದೇನೆ.ಸೋಲಿನ ಪರಾಮರ್ಶೆ ನಾಲ್ಕು ಗೋಡೆಗಳ ನಡುವಿರ ಬೇಕು. ಇಲ್ಲವಾದಲ್ಲಿ ವೈಯಕ್ತಿಕ ಸಂಬಂಧಗಳಿಗೆ ಧಕ್ಕೆ ತರುತ್ತವೆ ಎಂದು,ಪರಾಜಿತ ಅಭ್ಯರ್ಥಿ ಎಸ್.ಲಿಂಗಮೂರ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಎ. ಮುರಳಿ,ನರೇಂದ್ರ ಹೊನ್ಯಾಳ್,ರಾಜೇಶ್‌ಬುರುಡಿಕಟ್ಟೆ, ಸಂಪತ್,ನಾಗರಾಜ್‌ಬೇದ್ರೆ, ದಗ್ಗೆ ಶಿವಪ್ರಕಾಶ್ ಇದ್ದರು.