ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

mysore
Published on

ಮೈಸೂರು: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ್ ಕಾಮತ್ ಮಾತನಾಡಿ, ಭಾರತದ ಹಿಂದುಗಳು ಯಾವಾಗಲೂ ಶಾಂತಿ ಪ್ರಿಯರು. ಎಲ್ಲಧರ್ಮದ ಜನದೊಂದಿಗೆ ಹೊಂದಾಣಿಕೆಯಿಂದ ಬದುಕುವವರು.

ಎಲ್ಲ ಧರ್ಮೀಯರ ಜತೆಗೆ ಉತ್ತಮ ಸಾಮರಸ್ಯದಿಂದ ಇರಲು ಬಯಸುತ್ತಾರೆ. ಆದರೆ, ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಜಿಹಾದಿಗಳು ಹಿಂದುಗಳು ಮತ್ತು ಇತರ ಅಲ್ಪಸಂಖ್ಯಾತರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.

ಬಾಂಗ್ಲಾದಲ್ಲಿ ಹಿಂದು ದೇವಾಲಯಗಳು, ಪ್ರತಿಮೆಗಳನ್ನು ಅಪವಿತ್ರಗೊಳಿಸಿ, ಹಿಂದುಗಳ ಆಸ್ತಿ ನಾಶ ಮಾಡುತ್ತಿದ್ದಾರೆ. ಇದನ್ನು ತಡೆಯಲು ಅಲ್ಲಿಯ ಸರ್ಕಾರ ಯಾವುದೇ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ವಿಶ್ವ ಸಮುದಾಯ ಮತ್ತು ಭಾರತ ಸರ್ಕಾರ ನಿರೀಕ್ಷೆಯಂತೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಭದ್ರತೆ ಮತ್ತು ಸಂಘಟನೆಗಾಗಿ ಹಿಂದು ಸಮಾಜವನ್ನು ಜಾಗೃತಗೊಳಿಸಿದ ನಾಯಕ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಗಿದೆ.

ಜಾಮೀನು ಸಹ ನಿರಾಕರಿಸಲಾಗಿದೆ. ಕೂಡಲೇ ಹಿಂದು ನಾಯಕನ ಬಿಡುಗಡೆ ಮಾಡಬೇಕು. ಬಾಂಗ್ಲಾ ದೇಶದ ಹಿಂದುಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ವಿಶ್ವ ಸಂಸ್ಥೆ ಮಧ್ಯೆ ಪ್ರವೇಶಿಸಿ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಿಡುಗಡೆ ಮಾಡಲು ಸಹಕರಿಸಿ ಹಿಂದುಗಳು ಹಾಗೂ ದೇವಸ್ಥಾನದ ಭದ್ರತೆಗೆ ಸಹಕರಿಸಬೇಕೆಂದು ಒತ್ತಾಯಿಸಿದರು

ಸಂಘಟನೆಯ ಮುಖಂಡರಾದ ಅಂಬಿಕಾ, ಮಧು ಶಂಕರ, ಮಮತಾ, ಬಿಜೆಪಿಯ ಸವಿತಾ ಘಾಟ್ಕೆ, ಗೋಪಾಲ್, ಶಿವಕುಮಾರ್, ವಿಜಯೇಂದ್ರ, ಆರ್.ರಾಧಾಕೃಷ್ಣ, ಜಯಶ್ರೀ, ಚೇತನಾ, ಮಂಜುನಾಥ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net