ಹಿಂದು-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಆದ ಶ್ರೀರಾಮನವಮಿ ಹಬ್ಬ

7
Published on

ಮೈಸೂರು: ನಗರದ ಹಿಂದು-ಮುಸ್ಲಿಂ ಭಾವೈಕ್ಯತೆಗೆ ಶ್ರೀರಾಮನವಮಿ ಹಬ್ಬ ಸಾಕ್ಷಿಯಾಯಿತು.
ಹಿಂದು, ಮುಸ್ಲಿಂ ಸಮುದಾಯದವರು ಒಟ್ಟಾಗಿ ಅನ್ಯೋನ್ಯತೆಯಿಂದ ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿ ಭಾವೈಕ್ಯತೆ ಮೆರೆದರು. ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘದ ವತಿಯಿಂದ ಹಿಂದು -ಮುಸಲ್ಮಾನ್ ಭಾವೈಕ್ಯತೆಯಿಂದ ಶ್ರೀ ರಾಮಚಂದ್ರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಭಕ್ತಾದಿಗಳಿಗೆ ಪಾನಕ-ಮಜ್ಜಿಗೆ ಹಂಚುವ ಮೂಲಕ ಉಭಯ ಧರ್ಮೀಯರು ರಾಮನವಮಿ ಸಂಭ್ರಮಿಸಿದರು.

ಮುಸಲ್ಮಾನ್ ಬಾಂಧವರು ಭಾಗವಹಿಸಿದ್ದಕ್ಕೆ ಹಿಂದು ಯುವಕರು ಸಂತಸ ವ್ಯಕ್ತಪಡಿಸಿದರು. ಶ್ರೀರಾಮನ ವೇಷ ಧರಿಸಿ ಬಂದ ಸಿದ್ಧಾರ್ಥ ಬಡಾವಣೆಯ ನಿವಾಸಿ ಜೀವನ್ ಅವರು ವಿಶೇಷ ಗಮನ ಸೆಳೆದರು. ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ತಾಜ್ ಮಹಮ್ಮದ್, ಲಿಂಗಪ್ಪ, ಅಬ್ದುಲ್ ರೆಹಮಾನ್, ವಾಸಿಂ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಲೋಹಿತ್ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net