ಹಿಂದು ಮಹಾಸಭಾ ಗಣಪತಿ ಮೆರವಣಿಗೆ: ಸಂಚಾರ ಮಾರ್ಗ ಬದಲಾವಣೆ

WEB Hindu maha sabha
Published on

ಶಿವಮೊಗ್ಗ: ನಗರದ ಪ್ರಮುಖ ಬೀದಿಗಳಲ್ಲಿ ಸೆ.9ರಂದು ಹಿಂದು ಮಹಾಸಭಾ ಗಣಪತಿ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನಗಳ ಮಾರ್ಗ ಹಾಗೂ ವಾಹನ ನಿಲುಗಡೆಯಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಆದೇಶಿಸಿದ್ದಾರೆ. 9ರಂದು ಬಿ.ಎಚ್.ರಸ್ತೆ, ನೆಹರು ರಸ್ತೆ, ಕುವೆಂಪು ರಸ್ತೆ ಮುಂತಾದ ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಬದಲಾವಣೆ ಮಾಡಲಾಗಿದೆ. ಕೋಟೆ ರಸ್ತೆ ಮತ್ತು ಓಲ್ಡ್ ಬಾರ್‌ಲೈನ್ ರಸ್ತೆಯಲ್ಲಿ ಎಲ್ಲ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಬೇರೆ ಊರುಗಳಿಂದ ನಗರದೊಳಕ್ಕೆ ಬರುವ ಬಸ್ ಮತ್ತಿತರ ವಾಹನಗಳಿಗೆ ಅವಕಾಶ ನಿರಾಕರಿಸಲಾಗಿದೆ. ಮೆರವಣಿಗೆ ಸಾಗುವ ಮಾರ್ಗಗಳ ಪಕ್ಕದಲ್ಲಿನ 100 ಅಡಿಯೊಳಗೆ ಯಾವುದೇ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ. ಪೊಲೀಸ್ ವಾಹನಗಳು, ಗಣ್ಯ ವ್ಯಕ್ತಿಗಳ ವಾಹನಗಳು, ಆಂಬುಲೆನ್ಸ್ ಹಾಗೂ ಮೂಲ ಸೌಕರ್ಯ ಒದಗಿಸುವ ವಾಹನಗಳ ಅನುಕೂಲಕ್ಕೆ ತಕ್ಕಂತೆ ಮಾರ್ಗ ಬದಲಾವಣೆಗಳಲ್ಲಿ ವಿನಾಯಿತಿ ನೀಡಲಾಗುತ್ತದೆ.

ಮೆರವಣಿಗೆ ಸಾಗುವ ಮಾರ್ಗ: ಕೋಟೆ ಭೀಮೇಶ್ವರ ದೇವಸ್ಥಾನ-ಎಸ್‌ಪಿಎಂರಸ್ತೆ-ರಾಮಣ್ಣ ಶ್ರೇಷ್ಠಿ ಪಾರ್ಕ್-ಗಾಂಧಿ ಬಜಾರ್-ಶಿವಪ್ಪನಾಯಕ ವೃತ್ತ- ಬಿ.ಎಚ್.ರಸ್ತೆ- ಎಎ ವೃತ್ತ-ನೆಹರು ರಸ್ತೆ-ಗೋಪಿ ವೃತ್ತ-ದುರ್ಗಿಗುಡಿ ಮುಖ್ಯರಸ್ತೆ-ಜೈಲ್ ವೃತ್ತ-ಕುವೆಂಪು ರಸ್ತೆ-ಶಿವಮೂರ್ತಿ ವೃತ್ತ- ಸವಳಂಗ ಮುಖ್ಯರಸ್ತೆ-ಮಹಾವೀರ ವೃತ್ತ-ಡಿವಿಎಸ್ ವೃತ್ತ- ಕಾನ್ವೆಂಟ್ ರಸ್ತೆ- ಬಿ.ಎಚ್.ರಸ್ತೆ-ಕೋಟೆ ಪೊಲೀಸ್ ಠಾಣೆ ರಸ್ತೆ-ಕೋಟೆ ರಸ್ತೆ ಮೂಲಕ ತೆರಳಿ ಭೀಮೇಶ್ವರ ದೇವಸ್ಥಾನದ ಬಳಿ ತುಂಗಾ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net