

ಕಂಪ್ಲಿ: ಪಟ್ಟಣದಲ್ಲಿ ಹಿಂದು ಮಹಾಗಣಪತಿ ಶೋಭಾಯಾತ್ರೆ ಪೋಲಿಸರ ಬಿಗಿ ಬಂದೋಬಸ್ತ್‌ನಲ್ಲಿ ಸೋಮವಾರ ಸಂಭ್ರಮದಿಂದ ನಡೆಯಿತು. ಲಯನ್ಸ್ ಗ್ರೂಪಿನ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಕೂಡ ನಡೆಯಿತು.
ಹಿಂದು ಮಹಾಗಣಪತಿ ಶೋಭಾಯಾತ್ರೆಯಲ್ಲಿ ಮರಗಾಲು, ಕೀಲು ಕುದುರೆ, ನಂದಿಕೋಲು, ಡೊಳ್ಳು ಕುಣಿತ, ಕಹಳೆ, ಸಮಾಳ, ಹಗಲುವೇಷಗಾರರು ಸೇರಿದಂತೆ 10 ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಬಳ್ಳಾರಿ ಹೆಚ್ಚುವರಿ ಎಸ್ಪಿ ನವೀನ್ ಕುಮಾರ್, ಡಿವೈಎಸ್ಪಿ ಪ್ರಸಾದ್ ಗೋಖಲೆ, ಡಿಆರ್‌ಎಸ್ಪಿ ತಿಪ್ಪೇಸ್ವಾಮಿ, ಕೆ.ಬಿ.ವಾಸುಕುಮಾರ್ ಸೇರಿದಂತೆ ಆರು ಜನ ಪಿಐಗಳು, 12 ಪಿಎಸ್‌ಐ, 150ಎಚ್‌ಸಿ, ಪಿಸಿ, 130 ಜನ ಗೃಹರಕ್ಷಕ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಶಾಸಕ ಜೆ.ಎನ್.ಗಣೇಶ್, ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಹಿಂದು ಮಹಾಸಭಾ ಸ್ಥಳೀಯ ಘಟಕದ ಅಧ್ಯಕ್ಷ ಪುಟ್ಟಿ ಸಚಿನ್, ಪ್ರಮುಖರಾದ ಎಸ್.ಎಂ.ಗುರುಪ್ರಸನ್ನ, ಇಂದ್ರಜಿತ್‌ಸಿಂಗ್, ಮಂಜುನಾಯಕ, ಸದಾನಂದ, ಎಂ.ಪ್ರಸನ್ನ ಇತರರಿದ್ದರು.