

ಕಲಬುರಗಿ: ಹಿಂದುಮಹಾ ಗಣಪತಿ ಸಮಿತಿಯಿಂದ ಗಣೇಶ ಉತ್ಸವ ೨೧ ದಿನ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ನಾಗೇಂದ್ರ ಕಾಬಡೆ ತಿಳಿಸಿದರು.
ನಗರದ ಕೋಟೆ ಎದುರು ಅಯೋಧ್ಯೆಯ ರಾಮಮಂದಿರ ಮಾದರಿಯ ಪ್ರತಿಕೃತಿಯಲ್ಲಿ ಬಾಲರಾಮ ಅವತಾರಿ ಹಿಂದು ಮಹಾಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅದೇ ಸ್ಥಳದಲ್ಲಿಯೇ ವಿಶೇಷ ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮ ನಡೆಯಲಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೆ.೯ರಂದು ಸಂಜೆ ೬ಕ್ಕೆ ಮಾತೆಯರಿಂದ ಮಹಾ ಮಂಗಳಾರತಿ ಜರುಗಲಿದೆ. ಹಾರಿಕಾ ಮಂಜುನಾಥ ಅವರಿಂದ ದಿಕ್ಸೂಚಿ ಭಾಷಣ ಜರುಗಲಿದೆ. ಸೆ.೧೩ರಂದು ಸಂಜೆ ೫.೩೦ಕ್ಕೆ ಲP್ಷÀದಿಪೋತ್ಸವ ಜರುಗಲಿದೆ. ಸೆ.೧೫ರಂದು ಸಂಜೆ ೬.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.
ಸೆ.೨೦ರಂದು ಸಂಜೆ ೬.೩೦ಕ್ಕೆ ಗಣೇಶ ಮಂಡಳಿ ಸದಸ್ಯರಿಗೆ ಸನ್ಮಾನ ನಡೆಯಲಿದ್ದು, ಶ್ರೀಕಾಂತ ಶೆಟ್ಟಿ ಅವರಿಂದ ದಿಕ್ಸೂಚಿ ಭಾಷಣ ನಡೆಯಲಿದೆ. ಸೆ.೨೨ರಂದು ಸಂಜೆ ೭ಕ್ಕೆ ತುರ್ತು ಪರಿಸ್ಥಿತಿ ಬಗ್ಗೆ ಭಾಷಣ ಮಾಡಲಿz್ದÁರೆ. ಸೆ.೨೬ರಂದು ಬೆಳಗ್ಗೆ ೮.೧೫ಕ್ಕೆ ಗಣ ಹೋಮ ಜರುಗಲಿದೆ. ಸೆ.೨೭ರಂದು ಬೆಳಗ್ಗೆ ೧೦ಕ್ಕೆ ಹಿಂದೂ ಮಹಾಗಣಪತಿ ಬೃಹತï ಶೋಭಾಯಾತ್ರೆಯೊಂದಿಗೆ ವಿಜರ್ಸನೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಶರಣು ಪಪ್ಪಾ, ಮಲ್ಲಿಕಾರ್ಜುನ ಗಂಗಾ, ಸುರೇಶ ಟೆಂಗಲಿ, ಸಿz್ದÁರಾಜ ಬಿರಾದಾರ ಇತರರಿದ್ದರು.
ಬಾಕ್ಸ್ (ಚಿತ್ರ: ಮಾಧವಿ ಲತಾ)
೨೪ರಂದು ಮಾಧವಿ ಲತಾ ಭಾಷಣ
ಹಿಂದು ಮಹಾಗಣಪತಿ ಉತ್ಸವ ನಿಮಿತ್ತ ಸೆ.೨೪ರಂದು ಸಂಜೆ ೬.೩೦ಕ್ಕೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಹೋರಾಟ ಕಥನ ಕುರಿತು ಮಾಧವಿ ಲತಾ ಅವರು ದಿಕ್ಸೂಚಿ ಭಾಷಣ ಮಾಡಲಿz್ದÁರೆ ಎಂದು ನಾಗೇಂದ್ರ ಕಾಬಡೆ ತಿಳಿಸಿದರು.