

ಚಿತ್ರದುರ್ಗ: ದೇಶದ ಗಮನ ಸೆಳೆದಿರುವ ಕೋಟೆನಗರಿಯ ಹಿಂದು ಮಹಾಗಣಪತಿ ಮಹೋತ್ಸವದ ಅಂಗವಾಗಿ ಪಂಚಾಚಾರ್ಯ ಕಲ್ಯಾಣ ಪಂಟಪ ಸಮೀಪದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣಕ್ಕಾಗಿ ಶುಕ್ರವಾರ ಧ್ವಜಸ್ತಂಭ, ಗೋಮಾತೆ, ಭೂಮಿ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು.
ಇದಕ್ಕೆ ನಾಡಿನ ವಿವಿಧ ಮಠಾಧೀಶರು, ಉತ್ಸವ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಭಕ್ತರು ಸಾಕ್ಷಿಯಾದರು.
ಸೆ. 7ರಂದು ಹಿಂದು ಮಹಾಗಣಪತಿ ಮೂರ್ತಿ ಪ್ರತಿಷ್ಠಾಪಿಸಿ, ಅಂದಿನಿಂದ 27ರ ವರೆಗೆ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಆ ಸ್ಥಳದಲ್ಲಿ ತಾಯಿ ಭಾರತಾಂಬೆ, ಹನುಮಂತನ ಭಾವಚಿತ್ರವಿಟ್ಟು ಪೂಜಿಸಲಾಯಿತು.
ಉತ್ಸವ ಹೆಚ್ಚಿನ ಭಕ್ತಸಮೂಹ ಸೆಳೆಯುವಲ್ಲಿ ಸಫಲವಾಗಿದೆ. ಲಕ್ಷಾಂತರ ಜನಸಾಗರದ ನಡುವೆ ಶೋಭಾಯಾತ್ರೆ ಸಾಗಲಿದೆ. ಇದು ನಗರದ ಧಾರ್ಮಿಕ ಹಬ್ಬವಾಗಿ ಹೊರಹೊಮ್ಮಿದೆ ಎಂದು ಮಠಾಧೀಶರು ಬಣ್ಣಿಸಿದರು.
ಗಣಪತಿ ಮೂರ್ತಿಯೂ 14 ಅಡಿ ಎತ್ತರವಿದ್ದು, ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿದೆ. 28ರಂದು ಶೋಭಾಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಶ್ರೀಕೃಷ್ಣ ಯಾದವಾನಂದ ಶ್ರೀ, ಪುರುಷೋತ್ತಮಾನಂದಪುರಿ ಶ್ರೀ, ವಾಲ್ಮೀಕಿ ಪ್ರಸನ್ನಾನಂದ ಶ್ರೀ, ಶಿವಲಿಂಗಾನಂದ ಶ್ರೀ, ಸರ್ದಾರ ಸೇವಾಲಾಲ್ ಶ್ರೀ, ಶಿವಪ್ರಕಾಶ ಶ್ರೀ, ಶಾಂತವೀರ ಶ್ರೀ ನೇತೃತ್ವ ವಹಿಸಿದ್ದರು.
ಸಂಸದ ಗೋವಿಂದ ಎಂ ಕಾರಜೋಳ, ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಮುಖಂಡರಾದ ಬದರಿನಾಥ್, ಚನ್ನಕೇಶವ, ಸಂದೀಪ್, ಡಾ.ಮಂಜುನಾಥ್, ನಯನ್, ಅಶೋಕ್, ರಂಗನಾಥ್, ಸಾಗರ್, ಕಿಶೋರ್, ರಾಮಾಂಜನೇಯ, ಕಾರ್ತಿಕ್, ವಿಠ್ಠಲ್‌ರಾವ್, ದರ್ಶನ್, ತಿಪ್ಪೇಸ್ವಾಮಿ, ಸುರೇಶ್ ಸಿದ್ಧಾಪುರ, ಜಿ.ಎಸ್.ಅನಿತ್‌ಕುಮಾರ್, ಡಾ.ಸಿದ್ಧಾರ್ಥ ಗುಂಡಾರ್ಪಿ, ವೆಂಕಟೇಶ್ ಯಾದವ್, ಉಮೇಶ್ ಕಾರಜೋಳ, ಪ್ರಶಾಂತ್, ಅಂಜಿನಪ್ಪ, ಅರುಣ್‌ಕುಮಾರ್, ಶರಣ್‌ಕುಮಾರ್, ಮಲ್ಲಿಕಾರ್ಜುನ್, ನಗರಸಭೆ ಸದಸ್ಯರಾದ ಸುರೇಶ್, ವೆಂಕಟೇಶ್, ಹರೀಶ್, ಅನುರಾಧಾ, ಶಶಿಧರ್, ಮಾಜಿ ಸದಸ್ಯ ರವಿಕುಮಾರ್ ಇತರರಿದ್ದರು.