ಹಿಂದು ಪರಂಪರೆ ರಕ್ಷಣೆಗೆ ಸಂತ ಸಮಾವೇಶ

Saints' conference to protect Hindu heritage
Saints' conference to protect Hindu heritage
Published on

ಜಮಖಂಡಿ: ಹಿಂದು ಪರಂಪರೆಯ ರಕ್ಷಣೆ ಭಾಗವಾಗಿ ವಿಎಚ್‌ಪಿ ಮತ್ತು ಬಜರಂಗದಳ ವತಿಯಿಂದ ಜಿಲ್ಲಾಮಟ್ಟದ ಸಂತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಕನೂರಿನ ಮಾದಣ್ಣ ಮದಗೊಂಡ ಸಿದ್ದಮಠದ ಮಾದುಲಿಂಗ ಶ್ರೀಗಳು ಹೇಳಿದರು.

ನಗರದ ನಮಸ್ಕಾರ ಮಂಡಳಿಯ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.21 ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ತಾಲೂಕಿನ ಹುಲ್ಯಾಳ ಗುರುದೇಶವಾಶ್ರಮದಲ್ಲಿ ಸಂತ ಸಮಾವೇಶ0, ಎರಡು ಚಿಂತನಗೋಷ್ಠಿಗಳು ನಡೆಯಲಿವೆ ಎಂದರು.

ಸಮಾವೇಶದಲ್ಲಿ ಜಿಲ್ಲೆಯ 200ಕ್ಕೂ ಅಧಿಕ ಸಂತರು ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ ಹೊಕ್ಕಳ ಬಾವಿ ಮೈದಾನದಿಂದ ಬಸವ ಭವನದ ವರೆಗೆ ಶೋಭಾಯಾತ್ರೆ ನಡೆಯಲಿದೆ. ಸಂತರು, 1008 ಮಹಿಳೆಯರು, ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ.

ಬಸವ ಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ರಾಷ್ಟ್ರಸಂತ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಕನ್ಹೇರಿ ಕಾಡಸಿದ್ಧೇಶ್ವರಮಠದ ಅದೃಷ್ಯ ಕಾಡಸಿದ್ಧೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ವಿಹಿಂಪ ದಕ್ಷೇತ್ರೀಯ ಸಂಪರ್ಕ ಪ್ರಮುಖ ಜಿ.ಬಸವರಾಜ, ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪಾಜಿ, ಪ್ರಾಂತ ಕಾರ್ಯದರ್ಶಿ ಶಿವಕುಮಾರ ಚೋಳಶೆಟ್ಟಿ, ಪ್ರಾಂತ ಪ್ರಮುಖ ವೆಂಕಟೇಶ ದೇಶಪಾಂಡೆ, ಆರ್‌ಎಸ್‌ಎಸ್ ವಿಭಾಗ ಕಾರ್ಯವಾಹ ವಿಠ್ಠಲ ಕುಲಕರ್ಣಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಸಿದರೆಡ್ಡಿ, ಆಲಗೂರು ಧರಿದೇವರ ಮಠದ ಶಾಂತಮೂರ್ತಿ ಲಕ್ಷ್ಮ್ಮಣಮುತ್ಯಾ ಮಾತನಾಡಿದರು.

ಸರ್ವೋತ್ತಮ ಗಲಗಲಿ, ಉಮೇಶ ಸಿದರೆಡ್ಡಿ, ಹಣಮಂತ ಗಿರಡ್ಡಿ, ಕರೆಪ್ಪಾ ಬೀಳಗಿ, ಗಿರೀಶ ಕೆಂಗನಾಳ, ಮುತ್ತು ಲಕ್ಕನಗೌಡರ, ಸಾಗರ ಜಂಬಗಿ, ನಂದಕಿಶೋರ ಮಂತ್ರಿ, ತುಕಾರಾಮ ಅಸುಗಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net