ಹಿಂದು ಪರಂಪರೆ ಉಳಿಸಿ, ಬೆಳೆಸಿರಿ

28-10
ಬೈಲಹೊಂಗಲದಲ್ಲಿ ದುರ್ಗಾಮಾತಾ ದೌಡ್‌ಗೆ ಪ್ರಭುನೀಲಕಂಠ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಪ್ರಮೋದಕುಮಾರ ವಕ್ಕುಂದಮಠ, ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ, ಬಾಬು ಕುಡಸೋಮಣ್ಣವರ ಇತರರಿದ್ದರು.
Published on

ಬೈಲಹೊಂಗಲ, ಬೆಳಗಾವಿ: ಹಿಂದು ಸಮಾಜದ ಸಂಸ್ಕೃತಿ, ಪರಂಪರೆ, ಆಚರಣೆಗಳಿಗೆ ಐತಿಹಾಸಿಕ ಹಿನ್ನಲೆ ಇದೆ. ಅಂತಹ ಪವಿತ್ರ ಹಿಂದು ಧರ್ಮದ ಆಚರಣೆ, ಪರಂಪರೆ ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ ತಾಲೂಕು ಘಟಕದಿಂದ ನವರಾತ್ರಿ ದಸರಾ ಉತ್ಸವ ಅಂಗವಾಗಿ ಮಂಗಳವಾರ ನಡೆದ ಮೊದಲ ದಿನದ ಶ್ರೀದುರ್ಗಾ ಮಾತಾ ದೌಡ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮ ದೇವಿ ದೇವಸ್ಥಾನದಿಂದ ಆರಂಭವಾದ ದೌಡ್ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಳಿ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ಬಂದು ತಲುಪಿತು.
ಯೋಗ ಗುರು ಸಂಗಮೇಶ ಸವದತ್ತಿಮಠ, ತಾಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಉಪಾಧ್ಯಕ್ಷ ಶಿವಾನಂದ ಬಡ್ಡಿಮನಿ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮಾಜಿ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಮಹಾಂತೇಶ ತುರಮರಿ, ಸುಭಾಷ ತುರಮರಿ, ಗುರು ಮೆಟಗುಡ್ಡ, ವಿರೂಪಾಕ್ಷ ವಾಲಿ, ಕುಮಾರ ಪಾಟೀಲ, ಸಚಿನ ಚೀಲದ, ನಾರಾಯಣ ನಲವಡೆ, ಮಹೇಶ ಕಾದ್ರೊಳ್ಳಿ, ಶಂಕರ ಗೆಜ್ಜಿ, ಅಪ್ಪಾಸಾಹೇಬ ಬೊಸಲೆ, ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ನಾಗರಾಜ ಮರಕುಂಬಿ, ಮಹಾಂತೇಶ ಹೊಸೂರ, ಗಂಗಪ್ಪ ಗುಗ್ಗರಿ, ಆದಿತ್ಯಾ ಪಾಟೀಲ, ಅಶೋಕ ಸವದತ್ತಿ, ಕೃಷ್ಣ ಬಸ್ಮೆ, ಸಂತೋಷ ಹಡಪದ, ರವಿ ಜೊಂಜಾಳೆ, ಸಂತೋಷ ಹುಣಶಿಕಟ್ಟಿ, ಆನಂದ ಹಿರೇಮಠ, ಬಸವರಾಜ ದೊಡಮನಿ, ರವಿ ವನ್ನೂರ, ಚಂದ್ರು ಉಂಡಿ, ಈರಣ್ಣ ಮೆಳ್ಳಿಕೇರಿ, ಮಹಾಂತೇಶ ಹಣಸಿ, ರವಿ ಹುಲಕುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net