ಹಿಂದು ಪದದ ಚರ್ಚೆ ಅಪ್ರಸ್ತುತ : ಶಾಸಕ ಎನ್. ಮಹೇಶ್

n.mahesh
Published on

ಮೈಸೂರು: ಹಿಂದು ಪದದ ಕುರಿತು ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಚರ್ಚೆ ಅಪ್ರಸ್ತುತವಾಗಿದ್ದು, ಹಿಂದು, ಪಾರ್ಸಿ, ಜೈನ, ಬೌದ್ಧ ಧರ್ಮಗಳ ಮೂಲ ಭಾರತವಾಗಿದೆ ಎಂದು ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ಹೇಳಿದರು.

ನಗರದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರೊ.ಎಂ.ಎಸ್. ಶೇಖರ್ ರಚನೆಯ ಸೋಸಲೆ ಸಿದ್ದಪ್ಪ ಸಮಗ್ರ ಸಾಹಿತ್ಯ ಸಂಪುಟ (ಸಂಪಾದಿತ) ಮತ್ತು ಹೊರಳು ಹಾದಿ (ವಿಮರ್ಶೆ) ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಹಿಂದು, ಪಾರ್ಸಿ, ಜೈನ, ಬೌದ್ಧ ಧರ್ಮಗಳು ಆಧ್ಯಾತ್ಮಿಕ ಮತ್ತು ಸಾಮಾಜಿಕ ಬದುಕಿನಿಂದಲೇ ಹುಟ್ಟುಕೊಂಡಿವೆ. ಹಾಗಾಗಿ ಹಿಂದು ಪದವನ್ನು ಪ್ರತ್ಯೇಕ ಮಾಡಿ ಭಾರತ ಬದುಕಲು ಸಾಧ್ಯವಿಲ್ಲ. ಹಾಗಾಗಿ ಹಿಂದು ಪದದ ಚರ್ಚೆ ಅಪ್ರಸ್ತುತ. ಭಾರತ ಎಂಬುದು ಒಂದು ರೀತಿ ಒಗಟಿನಂತೆ, ಅದು ಅರ್ಥವಾಗುವುದು ಬುದ್ಧರಂತ ವ್ಯಕ್ತಿಗಳಿಗೆ ಮಾತ್ರ. ಈ ಒಗಟಿನ ನಡುವೆ ಇರುವಂತಹ ವೈರುಧ್ಯಗಳು ಕೆಲವು ಪೊಲಿಟಿಕಲ್ ಮೈಲೇಜ್‌ಗಾಗಿ ಅಷ್ಟೇ. ಇಂತಹ ಚರ್ಚೆಗಳ ಬಗ್ಗೆ ಹೆಚ್ಚು ಚಿಂತಿಸುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net