ಹಿಂದು ಧರ್ಮದ ಕೊಡುಗೆ ಅಪಾರ

18-8
ಅಥಣಿ ತಾಲೂಕಿನ ಕೊಕಟನೂರ ಗ್ರಾಪಂ ಕಾರ್ಯಾಲಯದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ಕಲ್ಲಪ್ಪ ಬಡಿಗೇರ, ಕಲ್ಲಪ್ಪ ಪತ್ತಾರ, ಅರ್ಜುನ ಪೂಜಾರಿ, ಸಂಜು ಬಡಿಗೇರ, ರಾಜುಗೌಡ ಪಾಟೀಲ, ಮೀನಪ್ಪ ಬಡಿಗೇರ ಇತರರಿದ್ದರು.
Published on

ಅಥಣಿ ಗ್ರಾಮೀಣ, ಬೆಳಗಾವಿ: ಭಾರತ ವಿವಿಧತೆಯಲ್ಲಿ ಏಕತೆ ಸಾಧಿಸಲು ಹಿಂದು ಧರ್ಮದ ಕೊಡುಗೆ ಸಾಕಷ್ಟಿದೆ ಎಂದು ತೆಲಸಂಗ ಹೋಬಳಿ ವಿಶ್ವಕರ್ಮ ಸಮಾಜ ಸಂಘದ ಉಪಾಧ್ಯಕ್ಷ ಕಲ್ಲಪ್ಪ ಬಡಿಗೇರ ಹೇಳಿದರು.

ತಾಲೂಕಿನ ಕೊಕಟನೂರ ಗ್ರಾಪಂ ಕಾರ್ಯಲಯದಲ್ಲಿ ವಿಶ್ವಕರ್ಮ ಸಮಾಜದ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದು ಧರ್ಮ ಜಾಗೃತವಾಗಬೇಕಿದೆ. ವಿಶ್ವಕರ್ಮರು ದೈವ ಸಂಭೂತರಾಗಿದ್ದು, ದೇವತೆಗಳಿಗೆ ಭವನಗಳನ್ನು ನಿರ್ಮಿಸಿ ಕೊಡುತ್ತಿದ್ದರು. ಯುವಕರು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದರು.

ಅರ್ಚಕ ಅರ್ಜುನ ಪೂಜಾರಿ ಮಾತನಾಡಿ, ವಿಶ್ವಕರ್ಮ ಸಮಾಜವು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಎಲ್ಲವೂ ಹೋರಾಟದ ಮೂಲಕವೇ ಪಡೆಯಬೇಕಾಗಿದೆ ಎಂದರು. ಗ್ರಾಮದಲ್ಲಿ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆ ಜರುಗಿತು. ಕೊಕಟನೂರ ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಕಲ್ಲಪ್ಪ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಸಂಜು ಬಡಿಗೇರ, ರಾಜುಗೌಡ ಪಾಟೀಲ, ಮೀನಪ್ಪ ಬಡಿಗೇರ, ಮಹೇಶ ಕಾಡದೇವರಮಠ, ಸಂತೋಷ ಪತ್ತಾರ, ರಂಗಪ್ಪ ಪೂಜಾರಿ, ಅಣ್ಣಾರಾಯ ದೇಸಾಯಿ, ಗುರುಪಾದಯ್ಯ ಹಿರೇಮಠ, ಶ್ರೀಶೈಲ ದೊಡಮನಿ ಇತರರಿದ್ದರು. ಸುಮಿತ ಪತ್ತಾರ ಸ್ವಾಗತಿಸಿದರು. ಹನುಮಂತ ಮಾದರ ನಿರೂಪಿಸಿದರು. ಶಿವರಾಮ ಹೊನಕಾಂಬಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net