ಹಿಂದು ಧರ್ಮ ಪುರಾತನವಾದದ್ದು

Hinduism is ancient.
Hinduism is ancient.
Published on

ಗುಳೇದಗುಡ್ಡ: ಮಕ್ಕಳಿಗೆ ಧಾರ್ಮಿಕ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಮೊಬೈಲ್, ಟಿವಿ ಹಾವಳಿಯಿಂದ ಮುಕ್ತಗೊಳಿಸಬೇಕಾಗಿದೆ. ಯುವಕರು ದೇಶಭಕ್ತಿ ಬೆಳೆಸಿಕೊಳ್ಳಬೇಕು. ಹಿಂದು ಧರ್ಮವನ್ನು ಬಿಟ್ಟು ನಿನ್ನೆ, ಮೊನ್ನೆ ಹುಟ್ಟಿದ ಧರ್ಮಕ್ಕೆ ಹೋಗಿ ಮತಾಂತರವಾಗುವುದು ಸರಿಯಲ್ಲ. ಹಿಂದು ಧರ್ಮ ಅತ್ಯಂತ ಪುರಾತನ ಧರ್ಮವಾಗಿದೆ. ಪ್ರತಿಯೊಬ್ಬ ಹಿಂದು ಇದನ್ನು ಅರಿತು ಧರ್ಮದ ಹಾದಿಯಲ್ಲಿ ನಡೆಯಬೇಕಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಾಗೂ ಮೌನಯೋಗಿಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ನಮ್ಮ ಹಿರಿಯರು ಐದು ಋಣಗಳನ್ನು ತೀರಿಸಲು ಹೇಳಿದ್ದಾರೆ. ಅವುಗಳೆಂದರೆ ದೇವರ ಋಣ, ಋಷಿ ಋಣ, ಪಿತೃ ಋಣ, ಭೂತ ಋಣ, ನರ ಋಣ. ಈ ಐದು ಋಣಗಳನ್ನು ತೀರಿಸಲೇಬೇಕು. ಅವುಗಳೊಂದಿಗೆ ಇನ್ನೊಂದು ಋಣ ಸೇರಿಸಿಕೊಳ್ಳಬೇಕು. ಅದು ದೇಶದ ಋಣ ಎಂದರು.

ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ ದಾಳಿ ಮಾಡಿದ್ದಾರೆ. ಈ ದೇಶದ ಪ್ರವಾಸಿ ಜನ ಕಾಶ್ಮೀರಕ್ಕೆ ಸುತ್ತಾಡಿಕೊಂಡು ಬರಲು ಹೋದವರ ಮೇಲೆ ದಾಳಿ ಮಾಡಿದ್ದಾರೆ. ಪ್ರವಾಸಿಗರಿಗೆ ಹೆಸರು, ಧರ್ಮ ಕೇಳಿ ಹಿಂದುಗಳನ್ನಷ್ಟೇ ಕೊಂದಿದ್ದಾರೆ. ಇದಕ್ಕೆ ಪ್ರತೀಕಾರ ಆಗಲೇಬೇಕು ಎಂದರು.

ಅಭಿನವ ಕಾಡಸಿದ್ಧೇಶ್ವರ ಶ್ರೀಗಳು, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಶ್ರೀಗಳು, ನಿಡಗುಂದಿ ಕೊಪ್ಪದ ಚನ್ನಬಸವ ಶ್ರೀಗಳು, ಕೆಲ್ಲೂರದ ಶಿವಕುಮಾರ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಮೃತಶಿಲಾ ಮೂರ್ತಿ ಭಕ್ತಿ ಸೇವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net