ಹಿಂದು ಧರ್ಮ ಉಳಿಯಬೇಕು ಎಂದರೆ ಧರ್ಮ ಪ್ರಚಾರಕರು ಮತ್ತು ಧರ್ಮ ವಿಚಾರಕರು ಅಗತ್ಯ

ಹಿಂದು ಧರ್ಮ ಉಳಿಯಬೇಕು ಎಂದರೆ ಧರ್ಮ ಪ್ರಚಾರಕರು ಮತ್ತು ಧರ್ಮ ವಿಚಾರಕರು ಅಗತ್ಯ
Published on

ಹಾಸನ: ಹಿಂದು ಧರ್ಮ ಉಳಿಯಬೇಕು ಎಂದರೆ ಧರ್ಮ ಪ್ರಚಾರಕರು ಮತ್ತು ಧರ್ಮ ವಿಚಾರಕರು ಅಗತ್ಯ ಎಂದು ಶಾಸಕ ಪ್ರೀತಂ ಜೆ ಗೌಡ ಹೇಳಿದರು.

ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ಹಾಸನ ಜಿಲ್ಲಾ ಧಾರ್ಮಿಕ ದತ್ತಿ ಅರ್ಚಕರ ಅಭಿವೃದ್ಧಿ ಒಕ್ಕೂಟದ ವತಿಯಿಂದ ನಡೆದ ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳ ಹಿಂದೆ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಅರ್ಚಕರಿಗಾಗಿ 6.5 ಕುಂಟೆ ಜಾಗ ನೀಡುವುದಾಗಿ ತಿಳಿಸಿದ್ದೆ. ಜಾಗವನ್ನು ಈಗಾಗಲೆ ನಿಗದಿಪಡಿಸಲಾಗಿದೆ. ಅದರಂತೆ ಆ ಜಾಗದ ನೋಂದಣಿಗಾಗಿ ನನ್ನ ವೈಯಕ್ತಿಕ ಹಣವನ್ನು ಭರಿಸಿ ಅರ್ಚಕರ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಧರ್ಮದ ವಿರುದ್ಧ ಅನೇಕ ಭಾರಿ ಅಕ್ರಮಣ ನಡೆದರು ಸಹ ಯಾಕೆ ಇನ್ನೂ ನಮ್ಮ ಧರ್ಮ ಉಳಿದಿದೆ ಎಂದರೆ ಶ್ರದ್ಧೆ, ಭಕ್ತಿ , ನಂಬಿಕೆಯಿಂದ ನೆರವೇರಿಸುವ ಕಾರ್ಯಗಳು. ಶೇಕಡ 95 ರಷ್ಟು ಅರ್ಚಕರು ಸಮಸ್ಯೆಯಲ್ಲಿದ್ದಾರೆ. ಅರ್ಚಕರು ನನಗೆ ನೀಡಿರುವ ಮನವಿ ಪತ್ರವನ್ನು ಸಿಎಂ ಅವರಿಗೆ ವೈಯಕ್ತಿವಾಗಿ ತಲುಪಿಸಿ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಯಾರು ಧರ್ಮವನ್ನು ಉಳಿಸುತ್ತಾರೋ ಅವರನ್ನು ಬೆಂಬಲಿಸುವುದು ಅಗತ್ಯವಾಗಿದೆ. ಧರ್ಮವನ್ನು ಉಳಿಸುವ ವ್ಯಕ್ತಿಯನ್ನು ರಾಜಕೀಯದ ಹೊರತಾಗಿಯೂ ಬೆಂಬಲಿಸಬೇಕು. ಧರ್ಮ, ದೇಶ, ರಾಷ್ಟೀಯತೆಯನ್ನು ಕಾಪಾಡುವ ನಾಯಕರಾದ ನರೇಂದ್ರ ಮೋದಿ ಮತ್ತು ಯಡಿಯೂವರಪ್ಪರನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಜೋಡಿಮಲ್ಲಪ್ಪನಹಳ್ಳಿ ಮಠದ ಪ್ರವೀಣ್ ಸರಸ್ವತಿ ಸ್ವಾಮೀಜಿ, ಜಿಲ್ಲಾ ಅರ್ಚಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸೋಮಶೇಖರಯ್ಯ, ಕಾರ್ಯಾಧ್ಯಕ್ಷ ಪುಟ್ಟಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಧನಂಜಯ ಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net