

ಭಾಲ್ಕಿ: ಪಟ್ಟಣದ ವಿವಿಧ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಾಲೂಕು ಘಟಕದಿಂದ ವಿಜಯ ದಶಮಿ ಉತ್ಸವ ನಿಮಿತ್ತ ಶನಿವಾರ ಪಥ ಸಂಚಲನ ನಡೆಯಿತು.
ಸಾವಿರಾರು ಸ್ವಯಂ ಸೇವಕರು ಸಮವಸ್ತ್ರ ಧರಿಸಿ, ಕೈಯಲ್ಲಿ ಲಾಠಿ ಹಿಡಿದು ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ಹಿಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸಿದರು.
ಅಧಿದೇವತೆ ಭಾಲ್ಕೇಶ್ವರ ಮಂದಿರದಿಂದ ಪ್ರಾರಂಭವಾಗಿ ಭಾಲ್ಕಿ ಕೋಟೆಗೆ ಹೊಂದಿಕೊಂಡು, ಹಳೆಯ ಪಟ್ಟಣದ ಧಮೇಶ್ವರ ಮಂದಿರ, ವೀರಭದ್ರೇಶ್ವರ ಮಂದಿರ, ಚಾವಡಿ, ಹಿರೇಮಠದ ಮೂಲಕ ಸಾಗಿ ಪುರಸಭೆ ಕಚೇರಿಯಿಂದ ಬೊಮ್ಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಮಹಾತ್ಮ ಜೋತಿಬಾ ಫುಲೆ ವೃತ್ತ, ಮಹಾತ್ಮ ಗಾಂಧಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಹಾದು ಚನ್ನಬಸವಾಶ್ರಮದಲ್ಲಿ ಸಮಾವೇಶಗೊಂಡಿತು.
ಪಥ ಸಂಚಲನದಲ್ಲಿ ಪ್ರಮುಖರಾದ ಶಿವಕುಮಾರ ಲೋಖಂಡೆ, ಸಂತೋಷ ಬಿಜಿಪಾಟೀಲ್, ಸಚಿನ ಜಾಧವ್, ಶಿವಕುಮಾರ ಕೇರೂರೆ, ಚಂದ್ರಕಾಂತ ತಳವಾಡೆ, ಉಮಾಕಾಂತ ವಾರದ, ಮಹೇಶ ವಂಕೆ, ಶ್ರೀಧರ ಪಾಟೀಲ್, ಈಶ್ವರ ನಿಗೆವಾನ, ರಮೇಶ ಬಳತೆ, ನರಸಿಂಗ ಇಂಚೂರೆ, ನಿರಂಜನ ದೇಶಮುಖ, ಪ್ರೇಮ ದೇಶಮುಖ, ಪವನ ಸ್ವಾಮಿ, ಸಂಜು ಎಂತ್ರಾಸೆ, ಚನ್ನಬಸವಣ್ಣ ಬಳತೆ, ಸೂರಜಸಿಂಗ್ ರಜಪುತ ಇತರರಿದ್ದರು.