ಹಿಂದು ಜನಜಾಗೃತಿ ಸೇನಾ ಸಮಿತಿ ರಾಜ್ಯ ಘಟಕ ಉದ್ಘಾಟನೆ 18ಕ್ಕೆ

IMG-20220914-WA0046.jpg
Published on

ದಾವಣಗೆರೆ: ನಗರದ ಲೇಬರ್‌ ಕಾಲನಿ ಬಯಲು ರಂಗಮಂಟಪದಲ್ಲಿ ಸೆ.18 ರಂದು ಹಿಂದು ಜನಜಾಗೃತಿ ಸೇನಾ ಸಮಿತಿ ಸಂಘಟನೆ ರಾಜ್ಯ ಘಟಕ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಸೇನೆಯ ಸಂಸ್ಥಾಪಕ ಅಧ್ಯಕ್ಷ ಚೇತನ್‌ ಜಿ. ಕನ್ನಡಿಗ ತಿಳಿಸಿದರು.

ಅಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಂದು ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ಮಧುಗಿರಿ ಮೋದಿ, ನವಭಾರತ ಹಿಂದು ದಲಿತ ಸಂಘದ ರಾಜ್ಯಾಧ್ಯಕ್ಷ ಕುಮಾರ ಗರುಡಕೇಸರಿ, ಬಜರಂಗದಳದ ಸಂತೋಷ್ ಕರತಾಳ ಹಾಗೂ ವೀಣಾ ಕನ್ನಡತಿ ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.17 ಕಂದು ಬೆಳಗ್ಗೆ 10 ಗಂಟೆಗೆ ನಗರದ ವೆಂಕಟೇಶ್ವರ ವೃತ್ತದಿಂದ ಜಯದೇವ ವೃತ್ತದವರೆಗೆ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.

ರಾಶಿಕ್, ಶಕುಂತಲಾ, ದುಷ್ಯಂತ್‌ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net