ಹಿಂದು ಕಾರ್ಯಕರ್ತರ ಹತ್ಯೆ ಆರೋಪಿಗಳನ್ನು ಬಂಧಿಸಿ

VISWA HINDU PARISHED AND HINDU JANA JAGRUTI JOINTLY PROTEST AND SUBMIT MEEMONDRUM TO DC OFFICE (1)
Published on

ರಾಯಚೂರು
ಜೈನಮುನಿ ಕಾಮಕುಮಾರ ನಂದಿ ಹಾಗೂ ಟಿ.ನರಸಿಪುರದಲ್ಲಿ ಹಿಂದು ಕಾರ್ಯಕರ್ತನ ಹತ್ಯೆಗಳಿಗೆ ಸಂಬಂಸಿದ ಆರೋಪಿಗಳನ್ನು ಬಂಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಭಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜನ ಜಾಗೃತಿ ಸಮಿತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಮಹ್ಮದ್ ಆಸ್ೀಗೆ ಮನವಿ ಸಲ್ಲಿಸಿ, ಎರಡು ಹತ್ಯೆಗಳಿಂದ ರಾಜ್ಯದಲ್ಲಿ ಭಯದ ವಾತಾವರಣ ಮೂಡುವಂತಾಗಿದ್ದು, ಆರೋಪಿಗಳನ್ನು ಬಂಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ದಾಳಿ ಮಾಡುತ್ತಿದ್ದ ಹಿಂದು ಕಾರ್ಯಕರ್ತ ವೇಣುಗೋಪಾಲನನ್ನು ಹನುಮ ಜಯಂತಿ ನಂತರ ಕೊಲೆ ಮಾಡಲಾಗಿದ್ದು, ಸಾಲ ವಾಪಸ್ ಕೇಳಿದ್ದಕ್ಕೆ ಜೈನಮುನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ.
ಬೆಂಗಳೂರಿನ ನಾಗರಕಟ್ಟೆಯಲ್ಲಿ ಪೂಜೆ ಮಾಡದಂತೆ ಪೊಲೀಸರು ನೋಟಿಸ್ ನೀಡಿದ್ದನ್ನು ಹಿಂಪಡೆಯಬೇಕು. ವಕ್ ಬೋರ್ಡ್ ಕಾಯ್ದೆಯನ್ನು ಹಿಂಪಡೆಯಬೇಕು. ರಾಜ್ಯದ ವಿವಿಧೆ ಕಾನೂನು ದುರುಪಯೋಗ ಪಡಿಸಿಕೊಂಡು ವಕ್ ಬೋರ್ಡ್ ಸರ್ಕಾರಿ, ಖಾಸಗಿ ಭೂಮಿ ಹಿಂಪಡೆಯುವುದನ್ನು ತಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಭಜರಂಗ ದಳ ಜಿಲ್ಲಾ ಸಂಚಾಲಕ ಶರಣಬಸವ, ಪದಾಕಾರಿಗಳಾದ ಮಹೇಶ, ಅಭಿಷೇಕ್, ರಘುನಾಥರೆಡ್ಡಿ, ವಿಶಾಲ್, ಸುಮೀತ್, ಶ್ರೀಕಾಂತ, ತಿಲಕರಾಜ್, ಈರಣ್ಣ, ಅಯ್ಯಪ್ಪ, ವಿಶ್ವ ಹಿಂದೂ ಪರಿಷತ್ ಪದಾಕಾರಿಗಳಾದ ಸುವರ್ಣ, ಕೃಷ್ಣವೇಣಿ, ಶಿವರಾಜ, ಜಯಶ್ರೀಮ, ಜ್ಞಾನೇಶಗೌಡ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net