ಹಿಂದು ಕಾರ್ಯಕರ್ತನ ಹತ್ಯೆಗೆ ಖಂಡನೆ

CTD 11 Yuva brigade--00000
Published on


ಚಿತ್ರದುರ್ಗ: ಟಿ.ನರಸೀಪುರದಲ್ಲಿ ಹಿಂದು ಕಾರ್ಯಕರ್ತ ವೇಣುಗೋಪಾಲ್ ಅವರನ್ನು ಜು. 8ರಂದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖಂಡಿಸಿ ಯುವ ಬ್ರಿಗೇಡ್‌ನ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಮಾಜದ ಸ್ವಾಸ್ಥೃ ಕೆಡಿಸುತ್ತಿರುವ ಹತ್ಯೆ ಪ್ರಕರಣಗಳಿಂದಾಗಿ ಎಲ್ಲೆಡೆ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಆದ್ದರಿಂದ ಕೊಲೆಗಾರರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರ, ರಾಜ್ಯಪಾಲರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ನಾಲ್ಕು ದಿನಗಳ ಹಿಂದೆಯಷ್ಟೇ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಆಶ್ರಮದ ಜೈನಮುನಿ ರಾಮಕುಮಾರ ನಂದಿ ಮಹಾರಾಜರನ್ನು ಭೀಕರವಾಗಿ ಹತ್ಯೆಗೈದ ಘಟನೆ ಇಡೀ ನಾಗರಿಕ ಸಮಾಜ ಬೆಚ್ಚಿ ಬೀಳುವಂತೆ ಮಾಡಿದ್ದು, ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಕ್ಷಸಿ ಗುಣ ರಕ್ತದಲ್ಲಿದ್ದವರಿಗೆ ಸರ್ಕಾರವೇ ಬೆನ್ನಿಗೆ ನಿಂತಾಗ ರಕ್ತ ಹೀರದಿರುವರೇ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಓಲೈಕೆ ರಾಜಕಾರಣ ಬಿಟ್ಟು ಹಿಂದುಗಳ ಜೀವಕ್ಕೆ ಬೆಲೆ ಕೊಡಿ. ಜೀವಗಳ ರಕ್ಷಣೆಗೆ ಮುಂದಾಗಿ ಎಂದು ಕೋರಿದರು.

ಯುವ ಬ್ರಿಗೇಡ್‌ನ ವಿಭಾಗ ಸಂಚಾಲಕರಾದ ಸ್ವಾಮಿ, ಜೀವನ್, ಜಿಲ್ಲಾ ಸಂಚಾಲಕ ರವಿಕುಮಾರ್, ಬಾಲಾಜಿ ಶಿವಶಕ್ತಿ, ಗರುಡಕೇಸರಿ ಕುಮಾರ್, ನವೀನ್‌ಕುಮಾರ್, ಮಂಜುನಾಥ್, ಗೋವಿಂದರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net