ಹಿಂದು ಆಚರಣೆಗೆ ಧಕ್ಕೆ ಬೇಡ

Dr Sabanna Talawar
Published on

ಕಲಬುರಗಿ: ಕೇಂದ್ರೀಯ ವಿವಿಯಲ್ಲಿ ವ್ಯಾಸ ಮಹರ್ಷಿಗಳ ಸ್ಮರಣೆಯಲ್ಲಿ ಗುರುಪೂಜೆ ಉತ್ಸವ ಮಾಡಿರುವುದನ್ನು ರಾಜಕೀಯ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ವಿನಾಕಾರಣ ಗೊಂದಲ ಸೃಷ್ಟಿಸಿ, ವಿದ್ಯಾರ್ಥಿಗಳ ಹಬ್ಬ ಆಚರಿಸುವ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಖಂಡಿಸಿದ್ದಾರೆ. ಗುರುಗಳ ಸ್ಮರಣೆಯಲ್ಲಿ ಮಾಡುವ ಉತ್ಸವಕ್ಕೆ ವಿರೋಧಿಸಿ, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ಹಿಂದುಗಳ ಹಬ್ಬಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಎಲ್ಲವನ್ನೂ ರಾಜಕೀಯಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅವರ ಹಬ್ಬ, ಉತ್ಸವ ಆಚರಿಸುವ ಹಕ್ಕು ಇದೆ. ಶೈಕ್ಷಣಿಕ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net