

ಕೊಳ್ಳೇಗಾಲ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2019-20, 2020-21, 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆ ಗುರುವಾರ ಸಂಘದ ಗೋಡಾನ್‌ನಲ್ಲಿ ಅಧ್ಯಕ್ಷ ಚಿಕ್ಕಮಾದನಾಯಕ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದಲ್ಲಿ ನಡೆದಿರುವ ಅವ್ಯವಹಾರಕ್ಕೆ ನೇರ ಕಾರಣರಾದ ಅಂದಿನ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವಂತೆ ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ ಸದಸ್ಯರು ಒಮ್ಮತದಿಂದ ತೀರ್ಮಾನ ಕೈಗೊಂಡರು.
ಈ ವೇಳೆ ಮಾತನಾಡಿದ ಚಿಕ್ಕಮಾದನಾಯಕ, ಅಂದಿನ ಗುಮಾಸ್ತ ಸಿದ್ದರಾಜು, 2017-18ನೇ ಸಾಲಿನಲ್ಲಿ 59,21,532 ರೂ. ಹಾಗೂ 2018-19ನೇ ಸಾಲಿನಲ್ಲಿ 1,97,94,468 ರೂ. ದುರುಪಯೋಗ ಮಾಡಿದ್ದಾರೆ. ಗುಮಾಸ್ತ ನಾಗೇಂದ್ರಸ್ವಾಮಿ 38,03,411 ರೂ. ಚೆಕ್ ದುರುಪಯೋಗ ಮಾಡಿದ್ದಾರೆ. ಗುಮಾಸ್ತ ಡಿ.ಕೃಷ್ಣಶೆಟ್ಟಿ 4,01,176 ರೂ. ದುರುಪಯೋಗ ಮಾಡಿದ್ದಾರೆ ಎಂದು ತಿಳಿಸಿದರು. ಇದೇ ವಿಷಯ ಕುರಿತು ಕೆಲ ಕಾಲ ಚರ್ಚೆ ನಡೆಯಿತು.
ಉಪಾಧ್ಯಕ್ಷ ಸಿ.ಎಲ್ಲಪ್ಪನ್, ಪ್ರಭಾರ ಕಾರ್ಯದರ್ಶಿ ಟಿ.ಲಿಂಗರಾಜು, ನಿರ್ದೇಶಕರಾದ ಮುರುಡೇಶ್ವರಸ್ವಾಮಿ, ಚಾಮರಾಜು, ಎಸ್.ಎಂ. ಜಗದೀಶ್ ನಾಯಕ, ಕೆ.ರಾಜುಗೋಪಾಲ್, ಎಂ.ಜಗದೀಶ್, ರೇಚಪ್ಪ, ಎಂ.ಗೋವಿಂದರಾಜು, ಎಂ.ಮುತ್ತುರಾಜು, ವಿ.ಮುತಮ್ಮ, ವತ್ಸಲ ಎನ್.ಸಿದ್ದರಾಜ್, ಸದಸ್ಯರಾದ ಅಣಗಳ್ಳಿ ಬಸವರಾಜು, ಸೋಮಶೇಖರ್, ಶಿವಮೂರ್ತಿ, ಬಾಲಕೃಷ್ಣ, ಕೃಷ್ಣರಾಜು, ಪಾಳ್ಯದ ಪರಶಿವ, ಉದಯಕುಮಾರ್, ಮಲ್ಲಿಕಾರ್ಜುನಸ್ವಾಮಿ, ಸಂಸ್ಥೆಯ ನೌಕರರಾದ ಲೂಸಿ ಪ್ಲೋರಿನ್, ಮಹದೇವಸ್ವಾಮಿ, ಇಮಾನ್ಯುವೆಲ್ ಬಾಬು, ರಮೇಶ್ ಇದ್ದರು.