ಹಿಂದಿ ಹೇರಿಕೆ ತಪ್ಪಿಸಿ

02-GPT-2
Published on

ಗುಂಡ್ಲುಪೇಟೆ: ಜೆ.ಎಸ್.ಬಿ. ಪ್ರತಿಷ್ಠಾನದಿಂದ ತಾಲೂಕಿನ ಸೋಮಹಳ್ಳಿ ಗ್ರಾಮದ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಮಾಸಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚಿಂತಕ ಎ.ಎಂ.ರವಿಕುಮಾರ್ ಮಾತನಾಡಿ, ನಾಡು- ನುಡಿಯ ಬಗ್ಗೆ ಎಲ್ಲರೂ ಹೆಮ್ಮೆಪಡಬೇಕು. ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ನೀಡಿದ ಶಿಕ್ಷಣ ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತದೆ. ಪದವಿವರೆಗೂ ಕನ್ನಡ ಭಾಷೆಯನ್ನು ಕಡ್ಡಾಯ ಮಾಡುವ ಜತೆಗೆ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ತಪ್ಪಿಸಬೇಕು ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ಬಹುಮಾನ ನೀಡಲಾಯಿತು. ಪ್ರಾಂಶುಪಾಲ ಗೌರಿಶಂಕರ, ಮುಖ್ಯಶಿಕ್ಷಕ ರಂಗಸ್ವಾಮಿ, ಸಹಶಿಕ್ಷಕರಾದ ಮಹದೇವಪ್ಪ, ನಾಗರಾಜು, ವೆಂಕಟಾಚಲ, ಮಮತಾ, ಚಂದ್ರು, ಪ್ರತಿಷ್ಠಾನದ ಶಶಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net