ಹಿಂದಿ ದಿವಸ್ ವಿರುದ್ಧ ಜೆಡಿಎಸ್ ಪ್ರತಿಭಟನೆ

14 Dwd 5 - Copy
Published on

ಧಾರವಾಡ: ಹಿಂದಿ ದಿವಸ ಆಚರಣೆಗೆ ವಿರೋಧ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಽ ನೀತಿ ಖಂಡಿಸಿ ಜಾತ್ಯತೀತ ಜನತಾ ದಳ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಹಾಗೂ ಗ್ರಾಮಾ೦ತರ ಜಿಲ್ಲಾ ಸಹಯೋಗದಲ್ಲಿ ನಗರದ ಜಿಲ್ಲಾಽಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮಹಾನಗರ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ಹಿಂದಿ ದಿವಸ್ ಆಚರಣೆ ಜಾರಿಗೆ ತಂದು ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡಲು ಹೊರಟಿರುವುದು ಖಂಡನೀಯ. ೪೦೦ ವರ್ಷಗಳ ಇತಿಹಾಸ ಇರುವ ಹಿಂದಿ ಭಾಷೆಯ ಹಬ್ಬ ಮಾಡುವ ಮಂದಿಗೆ ೨೫೦೦ ವರ್ಷಗಳ ಇತಿಹಾಸ ಇರುವ ಕನ್ನಡ ನಾಡು- ನುಡಿ ನೆನಪಿಗೆ ಬಾರದಿರುವುದು ನಾಚಿಕೆಗೇಡು. ಹಿಂದಿ ದಿವಸ್ ಆಚರಣೆ ಹಿಂದಿ ಭಾಷಿಕ ರಾಜ್ಯಗಳಿಗೆ ಸೀಮಿತವಾಗಲಿ. ಕನ್ನಡಿಗರಿಗೆ ಅದರ ಅಗತ್ಯ ಇಲ್ಲ. ರಾಜ್ಯದ ಜನರ ತೆರಿಗೆ ಹಣದಿಂದ ಹಿಂದಿ ದಿನ ಆಚರಿಸುತ್ತಿರುವುದು ಕನ್ನಡಿಗರಿಗೆ ಮಾಡಿದ ದ್ರೋಹ ಎಂದರು.
ಜೆಡಿಎಸ್ ಗ್ರಾಮಾ೦ತರ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ತುಳಸಿಕಾಂತ ಖೋಡೆ, ಗಂಗಾಧರ ಪೇರೂರ, ದೇವರಾಜ ಕಂಬಳಿ, ನವೀನಕುಮಾರ ಎಂ., ಪ್ರಕಾಶ ಅಂಗಡಿ, ಸಿದ್ಧಲಿಂಗೇಶ್ವರಗೌಡ ಮಹಾಂತಒಡೆಯರ, ಪರ್ವೇಜ್ ಕಟ್ಟಿಮನಿ, ಗುರುರಾಜ ತೋಟದ, ಶ್ರೀಶೈಲಸ್ವಾಮಿ, ಶಾಂತವೀರಪ್ಪ ಬೆಟಗೇರಿ, ವಿನಯ ಭರಮಗೌಡ, ರೇಖಾ ನಾಯ್ಕರ, ಸರಸ್ವತಿ ಕಟ್ಟಿಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net