ಹಿಂಜಾವೇ ಕಾರ್ಯಕರ್ತರ ಬಂಧನ ಖಂಡನೀಯ

HRR Hvj 20
Published on

ಹರಿಹರ: ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಅವರ ಬಂಧನ ಖಂಡಿಸಿ ಹಿಂ.ಜಾ. ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಘೋಷಣೆ ಕೂಗಿ ತೆರಳಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಆ. 14ರಂದು ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ 1947ರ ಮಧ್ಯರಾತ್ರಿ ಆಯೋಜಿಸಿದ್ದ ಭಾರತ ವಿಭಜನೆ ಮತ್ತು ವಿಭಜನೆಗೂ ಮುಂಚೆ ಈ ದೇಶದಲ್ಲಿ ಏನೇನು ಘಟನೆಗಳು ಘಟಿಸಿದವು ಎನ್ನುವ ಸತ್ಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ, ಅಲ್ಲಿನ ಪೊಲೀಸರು ಪ್ರಚೋದನಕಾರಿ ಭಾಷಣ ಮಾಡಿದ್ದೀರಿ ಎಂದು ಸುಳ್ಳು ಆರೋಪ ಹೊರಿಸಿ ಸತೀಶ್ ಪೂಜಾರಿ ಅವರನ್ನು ಬಂಧಿಸಿದ್ದಾರೆ. ಸತ್ಯ ಸಂಗತಿಗಳನ್ನು ತಿಳಿಸುವುದು ಅಪರಾಧವೆ? ಎಂದು ಪ್ರಶ್ನಿಸಿದರು. ವೇದಿಕೆಯ ದಿನೇಶ್, ಆದಿತ್ಯ, ವೆಂಕಟೇಶ್, ಮೊಬೈಲ್ ಶಿವು, ಪ್ರಸನ್ನ ಅಂಗಡಿ, ಆನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net