ಹಿಂಗುಲಾಬಿಂಕಾ ಮಂದಿರದಲ್ಲಿ ನವರಾತ್ರಿ ಉತ್ಸವ

15BK1
Published on

ಬಸವಕಲ್ಯಾಣ: ಭಾವಸಾರ ಕ್ಷತ್ರೀಯ ಸಮಾಜದಿಂದ ನಗರದ ಶ್ರೀ ಹಿಂಗುಲಾಂಬಿಕಾ (ಭವಾನಿ) ಮಂದಿರದಲ್ಲಿ ನವರಾತ್ರಿ ಮಹೋತ್ಸವ ನಿಮಿತ್ತ ಭಾನುವಾರದಿಂದ ಒಂಬತ್ತು ದಿನ ನಿತ್ಯ ಬೆಳಗ್ಗೆ ೮.೧೫ಕ್ಕೆ ಮತ್ತು ರಾತ್ರಿ ೯ಕ್ಕೆ ಶ್ರೀ ಹಿಂಗುಲಾಂಬಿಕಾ ದೇವಿಗೆ ಪೂಜೆ ಹಾಗೂ ಮಹಾ ಆರತಿ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.

ಭಾನುವಾರ ಬೆಳಗ್ಗೆ ೫ಕ್ಕೆ ದೇವಿಯ ಮಹಾ ಅಭಿಷೇಕ, ಪಂಚಾಮೃತ ಪೂಜೆ ಹಾಗೂ ಮಧ್ಯಾಹ್ನ ಘಟಸ್ಥಾಪಿಸಲಾಗಿದೆ. ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ ೭ಕ್ಕೆ ಕುಂಕುಮಾರ್ಚನೆ ವಿಶೇಷ ಕಾರ್ಯಕ್ರಮ ನಡೆಯಲಿದೆ. ಗುರುವಾರ ಬೆಳಗ್ಗೆ ೮ಕ್ಕೆ ಲಲಿತ ಪಂಚಮಿ ನಡೆಯಲಿದೆ.

ಭಾನುವಾರ ದುರ್ಗಾಷ್ಟಮಿ, ಹೋಮ-ಹವನ, ೨೩ ರಂದು ಮಹಾನವಮಿ, ೨೪ರಂದು ರಂದು ವಿಜಯದಶಮಿ, ಸಿಮೋಲ್ಲಂಘನೆ, (ದಸರಾ), ನಗರ ಪ್ರದಕ್ಷಿಣೆ ಜರುಗಲಿದೆ. ನವರಾತ್ರಿ ಮಹೋತ್ಸವ ನಿಮಿತ್ತ ನಿತ್ಯ ಸಂಜೆ ೭ರಿಂದ ೯ರವರೆಗೆ ಮಂದಿರದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net