ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಸೇವಾ ಭಾವ ಬೆಳೆಸಿ

MDG school
ಮೂಡಿಗೆರೆ ತಾಪಂನಲ್ಲಿ ವಿಶ್ವ ಮಾನವ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಾಗಾರದಲ್ಲಿ ತಹಸೀಲ್ದಾರ್ ರಾಜಶೇಖರ್‌ಮೂರ್ತಿ ಮಾತನಾಡಿದರು. ಎಂ.ಪಿ.ಕುಮಾರಸ್ವಾಮಿ, ಎಂ.ಎಸ್.ಅನಂತ್, ಬಿ.ರುದ್ರಯ್ಯ ಇತರರಿದ್ದರು.
Published on

ಮೂಡಿಗೆರೆ: ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮನೋಭಾವ ಮೂಡಿಸುವುದರಿಂದ ಶಿಕ್ಷಣದ ಬಗ್ಗೆ ಒಲವು ಹೆಚ್ಚಾಗುವ ಜತೆಗೆ ಉತ್ತಮ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ರಾಜಶೇಖರ್‌ಮೂರ್ತಿ ಹೇಳಿದರು.

ತಾಪಂನಲ್ಲಿ ಗಿರಿದರ್ಶಿನಿ ಹಾಸ್ಟೆಲ್ ಕಾಲೇಜು ವಿದ್ಯಾರ್ಥಿ ಬಳಗದಿಂದ ವಿಶ್ವ ಮಾನವ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯಲ್ಲಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿಬಂದ ಆಶಯವೇ ವಿಶ್ವ ಮಾನವ ಸಂದೇಶ. ಡಾ. ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವಣ್ಣ ಅವರಂತಹ ಮಹಾನ್ ವ್ಯಕ್ತಿಗಳ ದೃಷ್ಟಿಕೋನ ಹಾಗೂ ಶಿಕ್ಷಣದ ಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಾಗ ವಿಶ್ವ ಮಾನವರಾಗಲು ಸಾಧ್ಯ ಎಂದು ತಿಳಿಸಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕುವೆಂಪು ಹೇಳಿದಂತೆ ಮಗು ವಿಶ್ವ ಮಾನವನಾಗಿ ಜನಿಸುತ್ತದೆ. ಬೆಳೆಯುವಾಗ ಅಲ್ಪ ಮಾನವನನ್ನಾಗಿ ಸಮಾಜ ಮಾಡುತ್ತದೆ. ಅದಕ್ಕೆ ವಿದ್ಯೆಯೆಂಬ ಅಸ ಬಳಸಿದಾಗ ಮಾತ್ರ ಪುನಃ ವಿಶ್ವ ಮಾನವನಾಗಲು ಸಾಧ್ಯ ಎಂದು ಹೇಳಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್, ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಸಂಪನ್ಮೂಲ ವ್ಯಕ್ತಿ ಎಚ್.ನೌಷದ್, ಉಪನ್ಯಾಸಕಿ ಎಂ.ಬಿ.ಸಾವಿತ್ರಮ್ಮ, ನಿಲಯಪಾಲಕ ಅರ್.ಪ್ರಸಾದ್, ಎನ್.ಕೆಂಚಯ್ಯ, ಅನುಷಾ, ದೀಪು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net