

ಬೀದರ್: ಕಲಬುರಗಿ ಜಿಲ್ಲೆಯಗೆ ವರ್ಗಾವಣೆಯಾದ ಸಮಾಜ ಕಲ್ಯಾಣ ಇಲಾಖೆಯ ಔರಾದ್ ಪಟ್ಟಣದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಾರ್ಡನ್ ಅಫ್ರೋಜ್ ಪಟೇಲ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಔರಾದ್ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸತ್ಕರಿಸಿದರು. ಅಫ್ರೋಜ್ ಪಟೇಲ್ ಅವರ ಸೇವಾ ನಿಷ್ಠೆ, ಸಮಯ ಪ್ರಜ್ಞೆ ಹಾಗೂ ಪ್ರಾಮಾಣಿಕತೆಯನ್ನು ಕೊಂಡಾಡಿದರು.
ಬೀಳ್ಕೊಡುಗೆ ಸ್ಮರಣಾರ್ಥವಾಗಿ ಕಚೇರಿ ಆವರಣದಲ್ಲಿ ಸಸಿ ನೆಡಲಾಯಿತು. ಜಿಲ್ಲಾ ವಾರ್ಡನ್‍ಗಳ ಸಂಘದ ಅಧ್ಯಕ್ಷ ಗೌತಮ ಚಿಂತಲಗೇರಾ, ಪ್ರಥಮ ದರ್ಜೆ ಸಹಾಯಕ ಸತೀಶ್, ದ್ವಿತೀಯ ದರ್ಜೆ ಸಹಾಯಕರಾದ ಭೀಮಸಿಂಗ್, ಖಾದರ್, ವಾರ್ಡನ್‍ಗಳಾದ ಶ್ರೀಕಾಂತ ರಾಠೋಡ್ ಕಾಳಹಸ್ತಿ ಪತ್ತಾರ್, ರಾಜಶ್ರೀ ಇದ್ದರು.