

ಯಾದಗಿರಿ: ಯಾವುದೇ ನೋಟಿಸ್ ನೀಡದೆ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರಿಗೆ ವಜಾ ಮಾಡಿರುವುದನ್ನು ಖಂಡಿಸಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.
ಈ ವೇಳೆ ಪ್ರತಿಭಟನಾಕಾರರನ್ನು ಉz್ದೆÃಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಜಿ.ತೆಳಿಗೇರಿಕರ್, ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್., ಈ ಕಾರ್ಮಿಕರು ಸಮಾಜ ಕಲ್ಯಾಣ ಇಲಾಖೆಯಲ್ಲಿ ೧೦-೧೨ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಯಾವುದೇ ನೋಟಿಸ್ ನೀಡದೆ ಕಾರ್ಮಿಕ ನಿಯಮ ಉಲ್ಲಂಘಿಸಿ ವಜಾ ಮಾಡಿರುವುದು ಸರಿಯಲ್ಲ. ಕೂಡಲೇ ಅವರನ್ನು ಪುನಃ ಸೇವೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಯಾವುದೇ ಕಾರ್ಮಿಕರ ಕುರಿತು ಆರೋಪ ಬಂದಾಗ ಕಾರಣ ಕೇಳಿ ಮೂರು ನೋಟಿಸ್ ಜಾರಿ ಮಾಡಬೇಕು. ಜಾರಿಯಾದ ನೋಟಿಸ್‌ಗೆ ಉತ್ತರ ನೀಡದಿದ್ದಲ್ಲಿ ಕೆಲಸದಿಂದ ವಜಾ ಮಾಡಲು ಅರ್ಹರಿರುತ್ತಾರೆ. ನೋಟಿಸ್‌ಗೆ ಲಿಖಿತವಾಗಿ ಉತ್ತರಿಸಿದರೆ ವಜಾ ಮಾಡಲು ಸಾಧ್ಯವಿಲ್ಲ. ಕಾರ್ಮಿಕ ಇಲಾಖೆ ನಿಯಮಗಳನ್ನೇ ಇಲಾಖೆ ಪಾಲಿಸದೆ ಇರುವುದು ವಿಷಾದನೀಯ ಎಂದರು.
ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಮುನ್ನ ಜಿಲ್ಲಾ ಮತ್ತು ತಾಲೂಕ ಮಟ್ಟದ ಸಮಿತಿ ರಚನೆ ಮಾಡಿ, ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಇಲಾಖೆ ರಾಜ್ಯ ಮಟ್ಟದ ಅಧಿಕಾರಿಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ಇದ್ದರೂ ಮನ ಬಂದAತೆ ವಜಾ ಮಾಡುವ ಮೂಕಲ ಅಧಿಕಾರಿಗಳು ಸರ್ಕಾರದ ಆದೇಶ ಉಲ್ಲಂಘನೆ ಮಾಡಿರುವುದು ದೊಡ್ಡ ದುರಂತವಾಗಿದೆ ಎಂದು ದೂರಿದರು.
ವಜಾ ಮಾಡಿದ ಹಾಸ್ಟೆಲ್ ಕಾರ್ಮಿಕರನ್ನು ಕೂಡಲೇ ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಸಿಎಂಗೆ ಬರೆದ ಮನವಿಪತ್ರವನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸಲ್ಲಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್ ಚೌಕಿ, ಮರಳಮ್ಮ ದಾಸನಕೇರಿ, ಭೀಮಾಶಂಕರ ನಾಯ್ಕಲ್, ಶ್ರೀಕಾಂತ ಚಿಕ್ಕಮೇಟಿ, ಶಾಮಪ್ಪ, ನರಸಪ್ಪ, ಆನಂದಪ್ಪ, ಶಿವಪ್ಪ, ಕಾಶಪ್ಪ, ನಾಗಮ್ಮ, ಆಶಮ್ಮ, ಭೀಮಬಾಯಿ, ಇಂದ್ರಮ್ಮ, ರೇಣುಕಾ, ನಿಂಗಮ್ಮ, ಪದ್ಮಮ್ಮ ಇತರರಿದ್ದರು.