ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

CTD 3 HOSTREL STUDENT (2)--02
Published on


ಚಿತ್ರದುರ್ಗ: ಗುಣಮಟ್ಟದ ಆಹಾರವನ್ನು ಕೊಡುತ್ತಿಲ್ಲವೆಂದು ಆರೋಪಿಸಿ ನಗರದ ಸಮಾಜ ಕಲ್ಯಾಣ ಇಲಾಖೆ ಎಲ್‌ಎಲ್‌ಬಿ, ಬಿಇಡಿ ಹಾಸ್ಟೆಲ್ ವಿದ್ಯಾರ್ಥಿ ಗಳು ಇಲಾಖೆ ಜಿಲ್ಲಾ ಕಚೇರಿಯ ಆವರಣದಲ್ಲಿ ಪ್ರತಿಭಟಿಸಿದರು. ಕೊಳೆತ ತರಕಾರಿಯಿಂದ ಮಾಡಿದ ತಿಂಡಿ-ಅಡುಗೆಗಳನ್ನು ಬಡಿಸುತ್ತಾರೆ. ಉ ಪಹಾರ,ಊಟದಲ್ಲಿ ಕಂಬಳಿಹುಳ,ಕುರಿ ಹಿಕ್ಕೆ,ಚಪಾತಿಯಲ್ಲಿ ಗುಟ್ಕಾ ಕವರ್ ಸಿಕ್ಕಿದೆ ಎಂದು ಕಳಪೆ ಆಹಾರ, ಕೊಳೆತ ಟೊಮೆಟೊ ಪ್ರದರ್ಶಿಸಿ ಆ ಕ್ರೋಶ ವ್ಯಕ್ತಪಡಿಸಿದರು.
ಹಾಸ್ಟೆಲ್‌ನಲ್ಲಿ ಎಲ್‌ಎಲ್‌ಬಿಯ 120,ಬಿಇಡಿ 20 ಸೇರಿ 140 ವಿದ್ಯಾರ್ಥಿಗಳಿದ್ದೇವೆ. ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಇಲ್ಲ,ಮೂಲಸೌಕರ್ಯಗಳಿಲ್ಲ,ಕಳಪೆ ಆಹಾರ ಸೇವಿಸಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹಾಸ್ಟೆಲ್‌ನಲ್ಲಿರುವ ಅವ್ಯವಸ್ಥೆಯನ್ನು ಇಲಾಖೆ ಉಪ ನಿರ್ದೇಶಕರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.
ಹಾಸ್ಟೆಲ್‌ನಲ್ಲಿ ಕಾಯಂ ವಾರ್ಡನ್ ಇಲ್ಲ,ಇದರಿಂದಾಗಿ ತಿಂಗಳಿಗೊಮ್ಮೆ ಒಬ್ಬೊಬ್ಬರು ನಿಯೋಜನೆಗೊಳ್ಳುತ್ತಿದ್ದಾರೆ. ಕಾಯಂ ವಾರ್ಡನ್ ನೇಮಿಸ ಬೇಕು,ಸ್ವಚ್ಛತೆಯೊಂದಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಗುಣಮಟ್ಟದ ಆಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದರು. ಎಚ್.ಟಿ.ಮಂಜುನಾಥ್,ಪ್ರವೀಣ್, ಶ್ರೀನಿವಾಸ್, ಆಕಾಶ್,ದರ್ಶನ್,ವಿಶ್ವಾನಂದ್,ಗುರುಪ್ರಸಾದ್,ರುದ್ರೇಶ್,ತಿಪ್ಪೇಸ್ವಾಮಿ,ವಸಂತ್ ಮತ್ತಿತರ ವಿದ್ಯಾರ್ಥಿಗಳು ಇದ್ದರು.
(ಸಿಟಿಡಿ 3 ಹಾಸ್ಟೆಲ್ ಸ್ಟೂಡೆಂಟ್ ಸ್ಟ್ರೈಕ್)
ಗುಣಮಟ್ಟದ ಆಹಾರ,ಮೂಲಸೌಕರ್ಯಗಳಿಗೆ ಒತ್ತಾಯಿಸಿ ಚಿತ್ರದುರ್ಗದ ಎಲ್‌ಎಲ್‌ಬಿ,ಬಿಇಡಿ ಹಾಸ್ಟೆಲ್ ವಿದ್ಯಾರ್ಥಿಗಳು ನಗರದ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟಿಸಿದರು. ಎಚ್.ಟಿ.ಮಂಜುನಾಥ್,ಪ್ರವೀಣ್,ಶ್ರೀನಿವಾಸ್, ಆಕಾಶ್,ದರ್ಶನ್,ವಿಶ್ವಾನಂದ್,ಗುರುಪ್ರಸಾದ್,ರುದ್ರೇಶ್,ತಿಪ್ಪೇಸ್ವಾಮಿ,ವಸಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net