ಹಾಸನಾಂಬ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರಸಂಹಿತೆ ಅಳವಡಿಕ್ಕೆ ಒತ್ತಾಯ.

ಹಾಸನಾಂಬ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರಸಂಹಿತೆ ಅಳವಡಿಕ್ಕೆ ಒತ್ತಾಯ.
Published on

ಹಾಸನ: ಜಿಲ್ಲೆಯ ಆಧಿದೇವತೆ ಹಾಸನಾಂಬ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರಸಂಹಿತೆ ಅಳವಡಿಸುವ ಜೊತೆಗೆ ಕುಂಕುಮ ಹಚ್ಚಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಹಾಸನಾಂಬ ದೇವಸ್ಥಾನವು 12ನೇ ಶತಮಾನದ ಪ್ರಾಚೀನ ಸಪ್ತಮಾತೃಕೆ ದೇವತೆಗಳ ಶಕ್ತಿ ಪೀಠವಾಗಿದೆ. ವರ್ಷಕ್ಕೊಮ್ಮೆ ಲಕ್ಷಾಂತರ ಭಕ್ತರು ನಾನಾ ಭಾಗಗಳಿಂದ ದೇವಿ ದರ್ಶನಕ್ಕೆ ಬರುತ್ತಾರೆ. ಈ ವೇಳೆ ಭಾರತೀಯ ಸಾತ್ವಿಕ ಉಡುಪುಗಳನ್ನು ಧರಿಸಿ ಬರುವಂತೆ ಸೂಚನೆ ನೀಡಬೇಕು. ದೇವಸ್ಥಾನದ ಪಾವಿತ್ರತೆವನ್ನು ಕಾಪಾಡಲು ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯ ನಿಯಮಗಳನ್ನು ಅಳವಡಿಸಲಾಗಿದೆ ಅದೇ ಮಾದರಿಯನ್ನು ಇಲ್ಲಿಯೂ ಜಾರಿಗೊಳಿಸಬೇಕು ಕೋರಿದರು.

ಜನರು ದೇವರ ದರ್ಶನ ಪಡೆಯುವಾಗ ಪಾಶ್ಚಾತ್ಯ ಉಡುಪುಗಳನ್ನು ಧರಿಸುವುದು, ಅಸಭ್ಯ ವರ್ತನೆ, ವಿದೇಶಿ ಸಂಸ್ಕೃತಿ ಉಡುಪುಗಳ ಧಾರಣೆ ಮತ್ತು ದೇವಸ್ಥಾನಗಳ ಒಳಗೆ ಮೊಬೈಲ್ ಬಳಕೆ, ಮುಂತಾದ ಧರ್ಮಹಾನಿ ಕೃತ್ಯಗಳಿಗೆ ಅವಕಾಶ ನೀಡದೆ ದೇವಸ್ಥಾನದ ಪಾವಿತ್ರತೆಗೆ ಭಂಗ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಹಿಂದೂ ಜನಜಾಗೃತಿ ಸಮಿತಿಯ ಸುಜಾತ ನವೀನ, ಡಾ.ಎಸ್.ರಮೇಶ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net