ಹಾಸನಾಂಬ ದೇವರ ದರ್ಶನ ಪಡೆದ ಸಂಸದ ಪ್ರಜ್ವಲ್ ರೇವಣ್ಣ

ಹಾಸನಾಂಬ ದೇವರ ದರ್ಶನ ಪಡೆದ ಸಂಸದ ಪ್ರಜ್ವಲ್ ರೇವಣ್ಣ
Published on

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಭಾನುವಾರ ಹಾಸನಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ರೈತರ ಸಂಕಷ್ಟ ನಿವಾರಿಸುವಂತೆ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಂಡಿ ನೊವಿನ ಕಾರಣ ಈ ಬಾರಿ ದೇವಿಯ ದರ್ಶನಕ್ಕೆ ಬರಲು ಸಾಧ್ಯವಾಗಿಲ್ಲ. ಅವರ ಆರೋಗ್ಯ ಉತ್ತಮವಾಗಿದೆ ಎಂದು ಹೇಳಿದರು.

ಕೋವಿಡ್ ಸಾಂಕ್ರಾಮಿಕದ ಕಾರಣ ಇಡೀ ದೇಶ ತತ್ತರಿಸಿದೆ. ಮುಂದೆಂದೂ ಅಂತಹ ದಿನಗಳು ಬಾರದಿರಲಿ, ಎಲ್ಲ ಭಕ್ತರಿಗೂ ಸರಾಗವಾಗಿ ದೇವಿಯ ದರ್ಶನವಾಗಲಿ ಎಂದು ಹಾರೈಸಿದರು.

ದೇವರ ದರ್ಶನಕ್ಕೆ ಬಂದಿರುವ ಕಾರಣ ಯಾವುದೇ ರಾಜಕೀಯ ವಿಚಾರ ಮಾತನಾಡುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net