

ಹಾಸನ:ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜ. 29 ಹಾಗೂ 30 ರಂದು ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಏರ್ಪಡಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಸದ್ರುಲ್ಲಾಹ್ ಖಾನ್ ಹೇಳಿದರು.
ಬುಧವಾರ ಸಂಜೆ 6.45 ರಿಂದ 8.45ರ ವರೆಗೆ ಸಂತೃಪ್ತ ಜೀವನ ವಿಚಾರವಾಗಿ ಮಂಗಳೂರಿನ ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಇ ಮಾತನಾಡಲಿದ್ದಾರೆ.
ಗುರುವಾರ ಅದೇ ಸಮಯಕ್ಕೆ ಮಹಿಳಾ ಸುರಕ್ಷತೆ ವಿಷಯವಾಗಿ ವಿಚಾರ ಮಂಡನೆ ಮಾಡುತ್ತಾರೆ. ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಶಾಸಕ ಪ್ರೀತಂ ಜೆ. ಗೌಡ, ಡಿಸಿ ಆರ್. ಗಿರೀಶ್ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.