

ಹಾಸನ: ಸೆ.18 ರಂದು ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಪಾಂಚಜನ್ಯ ಗಣಪತಿ ಪ್ರತಿಷ್ಠಾಪನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಂಚಜನ್ಯ ಗಣಪತಿ ಸೇವಾಸಮಿತಿ ಅಧ್ಯಕ್ಷ ಮೊಗಣ್ಣಗೌಡ ತಿಳಿಸಿದರು.
ಕಳೆದ ಕಳೆದ 16 ವರ್ಷಗಳಿಂದ ಪಾಂಚಜನ್ಯ ಗಣಪತಿ ಸೇವಾ ಸಮಿತಿ ವತಿಯಿಂದ ಗಣೇಶೋತ್ಸವ ನಡೆಸುಕೊಂಡು ಬರಲಾಗುತ್ತಿದೆ. ಈ ವರ್ಷವೂ ಅದ್ದೂರಿ ಗಣಪತಿ ಉತ್ಸವ ನಡೆಸಲು ಉದ್ದೇಶಿಸಲಾಗಿತ್ತು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಾಂಚಜನ್ಯ ಗಣಪತಿ ಉತ್ಸವ ಹಾಸನದ ಪ್ರತಿಷ್ಠಿತ ಉತ್ಸವಗಳಲ್ಲಿ ಒಂದಾಗಿದೆ. ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿ 4 ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು. ಕೊನೆಯ ದಿನ ಶೋಭಾಯಾತ್ರೆ ನಡೆಸಿ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದರು.
ಸಮಿತಿ ಸದಸ್ಯ ರಕ್ಷಿತ್ ಭಾರಾಧ್ವಜ್ ಮಾತನಾಡಿ, ಪಾಂಚಜನ್ಯ ಗಣಪತಿ ಮಹೋತ್ಸವ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿತ್ತು. ಇಂದು ಒಂದು ಉತ್ಸವವಾಗಿ ಆಚರಣೆ ಮಾಡಲಾಗುತ್ತಿದೆ. ಭಕ್ತರೂ ಹೆಚ್ಚಾಗುತ್ತಿದ್ದಾರೆ. ಈ ಬಾರಿ ಸಹ ಕಲಾಭವನದಲ್ಲೇ ಗಣಪತಿ ಪ್ರತಿಷ್ಠಾಪನೆ ಮಾಡಲಾಗುವುದು. ಪಾಂಚ್ಯಜನ್ಯ ಕಚೇರಿಯಲ್ಲೂ ಗಣೇಶ ಮೂರ್ತಿ ಕೂರಿಸಲಾಗುವುದು. ಎರಡೂ ಕಡೆ ಪೂಜಾ ಕೈಂಕರ್ಯ ನಡೆಯಲಿವೆ ಎಂದು ನೀಡಿದರು. ಹಾಸನ ಜನತೆಗೆ ಉತ್ಸವದ ಮಹತ್ವ ತಿಳಿಯಬೇಕು.
ಹಿರಿಯ ತಾಯಂದಿರಿಗೆ ನೃತ್ಯ ನಾಟಕ ಇರಲಿದೆ, ಕಲಾಭವನ ಆವರಣ ನಡೆಯಲಿದೆ ಗಣಹೋಮ ಇರಲಿದೆ ಎಂದ ಅವರು, ಪರಿಸರ ಸ್ನೇಹಿ ಗಣೇಶನಿಗೆ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಷಯ ಎಂದರು. ಗಾಗೆಯೇ ಆರಂಭದಲ್ಲಿ 1 ಸಾವಿರದಷ್ಟು ಇರುತ್ತಿದ್ದ ಭಕ್ತರು,ಈಗ ಹೆಚ್ಚಾಗಿದ್ದಾರೆ ಎಂದರು.
ಪಾಂಚಜನ್ಯ ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ರವಿಸೋಮು, ಸದಸ್ಯರಾದ ಶರತ್, ವೇಣುಗೋಪಾಲ್ ಇದ್ದರು.