ಹಾಸನದಲ್ಲಿ ಬಕ್ರೀದ್ ಹಬ್ಬ ಸಾಮೂಹಿಕ ಪ್ರಾರ್ಥನೆ

ಹಾಸನದಲ್ಲಿ ಬಕ್ರೀದ್ ಹಬ್ಬ ಸಾಮೂಹಿಕ ಪ್ರಾರ್ಥನೆ
Published on

ಹಾಸನ: ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯಾದ್ಯಂತ ಗುರುವಾರ ಭಕ್ತಿ, ಸಡಗರ ಸಂಭ್ರಮದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಪ್ರತಿವರ್ಷದಂತೆ ಈ ಈ ವರ್ಷವೂ ಕೂಡ ಬಕ್ರೀದ್ ಹಬ್ಬದ ಅಂಗವಾಗಿ ನಗರದ ಹೊಸಲೈನ್ ರಸ್ತೆಯಲ್ಲಿರುವ ಹಳೆ ಈದ್ಗಾ ಮೈದಾನ ಬೆಳಗ್ಗೆ 8 ಗಂಟೆಯಿಂದ ಹಾಗೂ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಹೊಸ ಈದ್ಗಾ ಮೈದಾನದಲ್ಲಿ 9:30ರಿಂದ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪರಸ್ಪರ ಶುಭಾಶಯ ಹಚ್ಚಿಕೊಂಡ ನಂತರ ಮುಸ್ಲಿಂ ಧರ್ಮಗುರುಗಳು ಬಕ್ರಿದ್ ಹಬ್ಬದ ಸಂದೇಶ ನೀಡಿದರು. ಬಕ್ರಿದ್ ಹಿನ್ನಲೆಯಲ್ಲಿ ಈದ್ಗಾ ಮೈದಾನ ಸೇರಿದಂತೆ ನಗರದ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಈದ್ಗಾ ಕಮಿಟಿ ಅಧ್ಯಕ್ಷ ಸಮೀರ್ ಖಾನ್ ಮಾತನಾಡಿ, ಸಮಸ್ತ ಮುಸ್ಲಿಂ ಬಾಂಧವರೆಲ್ಲರಿಗೂ ಬಕ್ರೀದ್ ಹಬ್ಬದ ಅಂಗವಾಗಿ ಶುಭಾಶಯ ತಿಳಿಸುವುದಲ್ಲದೆ, ತ್ಯಾಗ ಬಲಿದಾನದ ಸಂಕೇತವಾದ ಈ ಹಬ್ಬವನ್ನು ನಾವೆಲ್ಲರೂ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಮುಸಲ್ಮಾನ್ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು, ಎಲ್ಲರಿಗೂ ದೇವರು ಒಳ್ಳೆಯದನ್ನ ಮಾಡಲಿ, ನನ್ನ ಕ್ಷೇತ್ರದಲ್ಲಿ ಎಲ್ಲಾ ಧರ್ಮದವರು ಅನ್ಯವಾಗಿ ಸಹಬಾಳ್ವೆಯಿಂದ ನಡೆದುಕೊಂಡು ಹೋಗಲಿ, ಕುವೆಂಪು ಅವರ ಮಾತಿನಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಎಲ್ಲಾ ಜಾತಿ, ಧರ್ಮದ ಜನಾಂಗದವರು ಒಗ್ಗಟ್ಟಿನಿಂದ ಅಣ್ಣ-ತಮ್ಮಂದಿರಂತೆ ಎಲ್ಲಾ ಜಯಂತಿಗಳನ್ನು ಒಟ್ಟಾಗಿ ಆಚರಿಸೋಣ ಎಂದು ಶಾಸಕ ಎಚ್.ಪಿ. ಸ್ವರೂಪ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net