

ಹಾಸನ: ಬಿಜೆಪಿಯ ಮಾಜಿ ಶಾಸಕರ ಆಪ್ತರ ಮೇಲೆ ಈಗಾಗಲೇ ಎಸ್‌ಐಟಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದು.ಪೆನ್‌ಡ್ರೈವ್ ಉತ್ಪಾದನೆ ಆಗಿರುವುದು ಹಾಸನದಲ್ಲಿ ಆದ್ದರಿಂದ ಮಾಜಿ ಶಾಸಕರನ್ನು ಕೂಡ ತನಿಖೆಗೆ ಒಳಪಡಿಸಬೇಕು ಎಂದು ಪ್ರೀತಂಗೌಡರ ಹೆಸರೇಳದೆ ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್ ಕೆ ಮಹೇಶ್ ಮತ್ತು ಬಾಗೂರು ಮಂಜೇಗೌಡ ಮಾತನಾಡಿ, ಪೆನ್ ಡ್ರೈವ್ ಪ್ರಕರಣದ ಮೂಲ ಹಂಚಿಕೆದಾರರ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ಹಿಂದೆಯೂ ಕೂಡ ಅಮಿತ್ ಶಾ ಮತ್ತು ಬಿಜೆಪಿ ನಾಯಕರಿಗೆ ತಿಳಿದಿತ್ತು. ಅಶೋಕ ಹೋಟೆಲ್‌ನಲ್ಲಿ ಅಶ್ಲೀಲ ವಿಡಿಯೋವನ್ನು ಬಿಜೆಪಿಯ ನಾಯಕರು ನೋಡಿದ್ದಾರೆ. ಯಾರ್ಯಾರು ನೋಡಿದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಸರ್ಕಾರ ವನ್ನು ಆಳಿದ ಅನುಭವ ಇದೆ. ಆದರೆ ಅವರು ಪೆನ್‌ಡ್ರೈವ್ ಪ್ರಕರಣದಲ್ಲಿ ವಿನಾಕಾರಣ ನಮ್ಮ ನಾಯಕರನ್ನು ಎಳೆದು ತಂದು ತನಿಖೆಯ ದಿಕ್ಕನ್ನ ತಪ್ಪಿಸಲು ಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿಯವರಿಗೂ ಕೂಡ ಎಲ್ಲ ಸತ್ಯಾ ತಿಳಿದಿದೆ. ಪೆನ್‌ಡ್ರೈವ್ ಉತ್ಪಾದನೆ, ಹಂಚಿಕೆ ಮಾಡಿರುವುದು ಯಾರು ಎಂದು ತಿಳಿದಿದೆ ಆದ್ದರೂ ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಕಲಿ ದೇವರಾಜಗೌಡನನ್ನ ಮುಂದಿಟ್ಟುಕೊಂಡು ಬಿಜೆಪಿಯ ನಾಯಕರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಆತ ವಿನಾಕಾರಣ ಕಾಂಗ್ರೆಸ್ ನಾಯಕರು ಮೇಲೆ ಆರೋಪ ಮಾಡುತ್ತಿದ್ದು, ಇದಕ್ಕೆಲ್ಲ ಕುಮಾರಸ್ವಾಮಿಯವರ ಕುಮ್ಮಕ್ಕು ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ನಿಜವಾಗಿಯೂ ನೈತಿಕತೆ ಇದ್ದರೆ ನೈಜ ತನಿಖೆಗೆ ಸಹಾಯಕರಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಹಾಸನದ ಬಿಜೆಪಿಯ ಮಾಜಿ ಶಾಸಕರ ಆಪ್ತರಾದ ಮನೆ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಕಚೇರಿಗಳ ಮೇಲೆ ಎಸ್‌ಐಟಿ ದಾಳಿ ನಡೆಸಿದೆ. ಈ ಹಿಂದೆ ಹಾಸನದಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದ ಕಿರಣ್‌ಗೌಡ ಹಾಗೂ ಮಧ್ಯದ ಸಾಹುಕಾರ ಶರತ್ ಅವರು ಮಾಜಿ ಶಾಸಕರ ಪರಮಾಪ್ತರು ಎಂಬುದು ಎಲ್ಲರಿಗೂ ತಿಳಿದ ವಿಚಾರ ಇದರಿಂದಾಗಿ ಪೆನ್ ಡ್ರೈವ್ ಹಂಚಿಕೆಯ ಕೈವಾಡ ಬಿಜೆಪಿ ಅವರದ್ದು ಎಂದು ಹೇಳಿದರು