

ಹಾಸನ : ವಿಧಾನಸಭೆ ಚುನಾವಣೆಗೆ ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಿಂದ 128 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಐವರು ಮಹಿಳೆಯರು ಸೇರಿ ಒಟ್ಟು 86 ಮಂದಿ ಚುನಾವಣಾ ಅಖಾಡದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ 14 ನಾಮಪತ್ರಗಳು ತಿರಸ್ಕೃತಗೊಂಡಿವೆ. ವಿಶೇಷ ಅಂದರೆ, ಅರಕಲಗೂಡು ಕ್ಷೇತ್ರದಲ್ಲಿ ಬಿಜೆಪಿ ಎಂದು ನಮೂದಿಸಿ ನಾಮಪತ್ರ ಸಲ್ಲಿಸಿದ್ದ ಎಂ.ಟಿ. ಕೃಷ್ಣೇಗೌಡ ಅವರ ನಾಮಪತ್ರ ಅಸಿಂಧುವಾಗಿದೆ. ಇವರು ಪಕ್ಷೇತರವಾಗಿಯೂ ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿದೆ.
ಶ್ರವಣಬೆಳಗೊಳದಲ್ಲಿ 17 ನಾಮಪತ್ರಗಳು ಸಲ್ಲಿಕೆಯಾಗಿದ್ದವು, ಓರ್ವ ಮಹಿಳೆ ಸೇರಿ 13 ಮಂದಿ ಚುನಾವಣಾ ಅಖಾಡದಲ್ಲಿ ಇದ್ದಾರೆ. ಈ ಕ್ಷೇತ್ರದಿಂದ ಯಾವುದೇ ನಾಮಪತ್ರಗಳು ತಿರಸ್ಕೃತವಾಗಿಲ್ಲ.
ಅರಸೀಕೆರೆ ಕ್ಷೇತ್ರದಲ್ಲಿ 17 ನಾಮಪತ್ರಗಳು ಸಲ್ಲಿಕೆಯಾಗಿದ್ದವು, 13 ಮಂದಿ ಚುನಾವಣಾ ಅಖಾಡದಲ್ಲಿ ಇದ್ದಾರೆ. ಈ ಕ್ಷೇತ್ರದಿಂದ ಯಾವುದೇ ನಾಮಪತ್ರಗಳು ಅಸಿಂಧುವಾಗಿಲ್ಲ.
ಬೇಲೂರು ಕ್ಷೇತ್ರದಲ್ಲಿ 20 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಓರ್ವ ಮಹಿಳೆ ಸೇರಿ 13 ಜನರು ಚುನಾವಣೆಯಲ್ಲಿ ಅಖಾಡದಲ್ಲಿ ಇದ್ದಾರೆ. ಯಾವುದೇ ನಾಮಪತ್ರಗಳು ತಿರಸ್ಕೃತಗೊಂಡಿಲ್ಲ.
ಹಾಸನ ಕ್ಷೇತ್ರದಲ್ಲಿ ಒಟ್ಟು 20 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಓರ್ವ ಮಹಿಳೆ ಸೇರಿ 11 ಮಂದಿ ಚುನಾವಣಾ ಕಣದಲ್ಲಿ ಇದ್ದಾರೆ. ಈ ಕ್ಷೇತ್ರದಲ್ಲಿ ಮೂರು ನಾಮಪತ್ರಗಳು ಅಸಿಂಧುಗೊಂಡಿವೆ.
ಹೊಳೆನರಸೀಪುರದಲ್ಲಿ ಒಟ್ಟು 16 ನಾಮಪತ್ರಗಳು ಸಲ್ಲಿಕೆಯಾಗಿದ್ದು, 8 ಮಂದಿ ಚುನಾವಣಾ ಅಖಾಡದಲ್ಲಿ ಇದ್ದಾರೆ. ಒಬ್ಬರ ನಾಮಪತ್ರ ಇಲ್ಲಿ ತಿರಸ್ಕೃತಗೊಂಡಿದೆ.
ಅರಕಲಗೂಡು ಕ್ಷೇತ್ರದಲ್ಲಿ 21 ನಾಮಪತ್ರ ಸಲ್ಲಿಕೆಯಾಗಿದ್ದು, ಓರ್ವ ಮಹಿಳೆ ಸೇರಿ 17 ಮಂದಿ ಚುನಾವಣಾ ಅಖಾಡದಲ್ಲಿ ಇದ್ದಾರೆ. ಇನ್ನು ಈ ಕ್ಷೇತ್ರದಲ್ಲಿ 4 ನಾಮಪತ್ರಗಳು ಅಸಿಂಧುಗೊಂಡಿವೆ.
ಸಕಲೇಶಪುರ ಮೀಸಲು ಕ್ಷೇತ್ರದಲ್ಲಿ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಓರ್ವ ಮಹಿಳೆ ಸೇರಿ 11 ಮಂದಿ ಚುನಾವಣಾ ಕಣದಲ್ಲಿ ಇದ್ದಾರೆ. ಇನ್ನು ಈ ಕ್ಷೇತ್ರದಲ್ಲಿ 6 ನಾಮಪತ್ರಗಳು ತಿರಸ್ಕೃತಗೊಂಡಿವೆ.
ಜಿಲ್ಲೆಯಲ್ಲಿ ಒಟ್ಟು 86 ಮಂದಿ ಚುನಾವಣಾ ಕಣದಲ್ಲಿ ಈಗ ಉಳಿದಿದ್ದಾರೆ. ಮೇ 24 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಎಷ್ಟು ಮಂದಿ ತಮ್ಮ ಉಮೇದುವಾರಿಕೆ ಹಿಂಪಡೆದು, ಕೊನೆಗೆ ಎಷ್ಟು ಮಂದಿ ಚುನಾವಣಾ ಅಖಾಡದಲ್ಲಿ ಉಳಿಯಲಿದ್ದಾರೆ ಎಂದು ಕಾದು ನೋಡಬೇಕು.