ಹಾಸನದ ಎಪಿಜೆ ಪದವಿ ಪೂರ್ವ ಕಾಲೇಜಿನಲ್ಲಿ 5ರಂದು ಪ್ರತಿಭಾ ಶೋಧ- 25 ಪರೀಕ್ಷೆ

exam
Published on

ಹಾಸನ: ನಗರದ ಅರಸೀಕೆರೆ ರಸ್ತೆಯ ಬಿ. ಕಾಟಿಹಳ್ಳಿಯಲ್ಲಿರುವ ಉನ್ನತಿ ಶಿಕ್ಷಣ ಸಂಸ್ಥೆಯ ಎಪಿಜೆ ಪದವಿ ಪೂರ್ವ ಕಾಲೇಜಿನಲ್ಲಿ 2025- 26 ನೇ ಸಾಲಿನ ಪ್ರಥಮ ಪಿಯುಸಿ ವಿಜ್ಞಾನ ಕೋರ್ಸ್‌ಗೆ ಆಯ್ಕೆ ಬಯಸುವ ವಿದ್ಯಾರ್ಥಿಗಳಿಗೆ ಜ.5ರ ಭಾನುವಾರ ಬೆಳಿಗ್ಗೆ 10.30 ರಿಂದ 11:30 ರವರೆಗೆ ಪ್ರತಿಭಾ ಶೋಧ- 25 ಪ್ರವೇಶ ಪರೀಕ್ಷೆ ಆಯೋಜಿಸಲಾಗಿದೆ.

ಜಿಲ್ಲೆಯ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಬಹುದು. ಈ ಪರೀಕ್ಷೆಯ ಫಲಿತಾಂಶ ಜ.9ರಂದು ಕಾಲೇಜಿನಲ್ಲಿ ಪ್ರಕಟಿಸಲಾಗುತ್ತದೆ. ಮತ್ತು ಪ್ರತಿ ಪೋಷಕರಿಗೂ ಪರೀಕ್ಷೆಯ ಫಲಿತಾಂಶವನ್ನು ದೂರವಾಣಿಯ ಮೂಲಕ ತಿಳಿಸಲಾಗುವುದು. ಉತ್ತಮ ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಆಕರ್ಷಕ ವಿದ್ಯಾರ್ಥಿ ವೇತನವನ್ನು ಶುಲ್ಕ ರಿಯಾಯಿತಿ ಮೂಲಕ ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಭಾನುವಾರ ಬೆಳಿಗ್ಗೆ 10.15ಕ್ಕೆ ಎಪಿಜೆ ಪಿಯು ಕಾಲೇಜಿಗೆ ಆಗಮಿಸಿ ಉಚಿತ ನೋಂದಣಿ ಮಾಡಿಕೊಂಡು ಪ್ರವೇಶ ಪರೀಕ್ಷೆಗೆ ಹಾಜರಾಗಬಹುದು ಎಂದು ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಿ.ಮುರಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9972728970, 9449133022 ದೂರವಾಣಿ ಮೂಲಕ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net