

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರಗಳ ಪರಿಶೀಲನೆ ಶುಕ್ರವಾರ ನಡೆಯಿತು. ಒಟ್ಟು 3 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 18 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಸಿ. ಸತ್ಯಭಾಮಾ ತಿಳಿಸಿದ್ದಾರೆ.
ಶೇಖ್ ಅಹಮದ್(ನವರಂಗ್ ಕಾಂಗ್ರೆಸ್), ಜೆ.ಕೆ. ಚಿಕ್ಕಯ್ಯ(ಪಕ್ಷೇತರ) ಮತ್ತು ಪರಮೇಶ ಎನ್.ಎಂ (ಪಕ್ಷೇತರ) ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಕ್ರಮಬದ್ಧವಾಗಿರುವ ನಾಮಪತ್ರಗಳು: ಗಂಗಾಧರ್ ಬಹುಜನ್(ಬಹುಜನ ಸಮಾಜ ಪಕ್ಷ), ಪ್ರಜ್ವಲ್ ರೇವಣ್ಣ (ಜಾತ್ಯತೀತ ಜನತಾದಳ), ಶ್ರೇಯಸ್ ಎಂ. ಪಟೇಲ್(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಜಿ.ಎನ್.ಆನಂದ್ (ಭಾರತೀಯ ಡಾ. ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ), ಎಂ.ವೈ.ದೇವರಾಜಾಚಾರಿ (ಕರ್ನಾಟಕ ರಾಷ್ಟ್ರ ಸಮಿತಿ), ಎಸ್.ಕೆ. ನಿಂಗರಾಜ(ಬಹುಜನ್ ಭಾರತ್ ಪಾರ್ಟಿ), ಕೆ.ಎ.ಪ್ರತಾಪ (ಉತ್ತಮ ಪ್ರಜಾಕೀಯ ಪಕ್ಷ), ಎಚ್.ಡಿ. ರೇವಣ್ಣ(ಪೂರ್ವಾಂಚಲ ಮಹಾಪಂಚಾಯತ್), ಬಿ.ಶಿವರಾಜ್ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ್)
ಪಕ್ಷೇತರ ಅಭ್ಯರ್ಥಿಗಳು: ಕೆ.ಆರ್. ಗಂಗಾಧರಪ್ಪ, ಜೆ.ಡಿ.ಬಸವರಾಜು , ಎಂ. ಮಹೇಶ್ ಉ. ಹರ್ಷ, ಆರ್.ಜಿ. ಸತೀಶ್, ಬಿ.ಎನ್.ಸಂತೋಷ್ , ಸಿದ್ಧಾಭೋವಿ, ಬಿ.ಎನ್. ಸುರೇಶ, ಹೇಮಂತ್ ಕುಮಾರ್, ಬಿ.ಎನ್, ಜಿ.ಹೊಳೆಯಪ್ಪ ಕಣದಲ್ಲಿ ಇದ್ದಾರೆ . ನಾಮಪತ್ರ ವಾಪಸ್ ಪಡೆಯಲು ಏ.8ರಂದು ಕೊನೆಯ ದಿನವಾಗಿದೆ.