

ಹಾಸನ: ಪ್ರತಿ 500 ಮೀಟರ್‌ಗೆ ಇರುವ ಶಾಲಾ- ಕಾಲೇಜಿಗೆ ಜವಬ್ಧಾರಿಯನ್ನು ಕೊಡುವುದರ ಮೂಲಕ ಪ್ರತಿ 10 ರಿಂದ 15 ದಿನಕ್ಕೊಮ್ಮೆ ಸ್ವಚ್ಛತೆ ಕಾರ್ಯದ ಜೊತೆಗೆ ಸುಂದರವನ್ನಾಗಿ ಪ್ರದೇಶವನ್ನು ಇಟ್ಟುಕೊಳ್ಳಲು ಕಾಯಕಲ್ಪವನು ಮಾಡಲು ಪೂರ್ವಭಾವಿ ಸಭೆನಡೆಸಲಾಗಿದ್ದು 43ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಇದರಲ್ಲಿ ಆಸಕ್ತಿವಹಿಸಿ ಕೈಜೋಡಿಸಿದ್ದಾರೆ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದರು.
ನಗರದ ರಿಂಗ್ ರಸ್ತೆಯಲ್ಲಿ ಡೈರಿ ವೃತ್ತದಿಂದ ತೇಜೂರು ಕೂಡಿನವರೆಗೂ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡರ ನೇತೃತ್ವದಲ್ಲಿ ಪರಿವರ್ತನಾ ಟ್ರಸ್ಟ್ ವತಿಯಿಂದ ಭಾನುವಾರ ಸ್ವಚ್ಛತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸ್ವಚ್ಚತೆ ಮಾಡಿ ಮಾತನಾಡಿದ ಅವರು, ಉತ್ತಮ ಪರಿಸರಕ್ಕಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಚ್ಛ ಸುಂದರ ಹಾಸನವನ್ನು ನಿರ್ಮಿಸಲು ಸಾರ್ವಜನಿಕರು ಸಹಕರಿಸಬೇಕು. ಯಾರಾದರೂ ರಸ್ತೆ ಬದು ಇಲ್ಲವೇ ಎಲ್ಲೆಂದರಲ್ಲಿ ಕಸ ಹಾಕಿದರೇ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿ ಜಾಗೃತಿ ಮೂಡಿಸಿದರು.ನಗರವನ್ನು ಸ್ವಚ್ಛವಾಗಿ ಇಡಬೇಕೆನುವ ಕಲ್ಪನೆಯನ್ನು ಹೊಂದಿದ್ದು, ಕಳೆದ 9 ವರ್ಷಗಳಿಂದ ನಗರಸಭೆ ಕಸ ವಿಲೇವಾರಿ ವಿಚಾರದಲ್ಲಿ ಸುತ್ತಮುತ್ತಲ ನಗರ ಪ್ರದೇಶಗಳಿಗೆ ಪ್ರಾಮಾಣಿಕವಾಗಿ ಜೋಡಣೆ ಮಾಡಿಕೊಂಡು ಕಸವಿಲೇವಾರಿ ಮಾಡುವುದಕ್ಕೆ ಒಂದು ಪ್ರಯತ್ನ ಮಾಡುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಸ್ವಚ್ಛತೆ ಬಗ್ಗೆ ಕೆಲಸವನ್ನು ಪ್ರಾರಂಭ ಮಾಡಲಾಗಿದ್ದು, ಸಾಕಷ್ಟು ಸ್ವಚ್ಚತೆಯನ್ನು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಡೀ ರಾಜ್ಯವು ಹಾಸನ ನಗರವನ್ನು ತಿರುಗಿ ನೋಡುವ ರೀತಿ ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡಿಕೊಳ್ಳಲು ನಮ್ಮ ತಂಡ ಸಿದ್ಧವಾಗಿದೆ ಎಂದು ಹೇಳಿದರು.
ಯಾರದರೂ ರಸ್ತೆ ಬದಿ ಕಸ ಎಸೆದರೇ ಅದನ್ನು ಶಾಲಾ-ಕಾಲೇಜಿಗೆ ಹೋಗುವ ನಿಮ್ಮ ಮಕ್ಕಳೆ ವಿಲೇವಾರಿ ಮಾಡಬೇಕಾದ ಪರಿಸ್ಥಿತಿ ಉದ್ಭವ ಆಗುತ್ತದೆ. ಇಂತಹ ಸನ್ನಿವೇಶ ತಡೆಯಬೇಕಾದರೇ ನಮ್ಮ ಮನೆ ಕಸವನ್ನು ಆಟೋ ಟಿಪ್ಪರ್ ಗಳಿಗೆ ಮತ್ತು ಟ್ರಾಕ್ಟರ್ ಗಳಿಗೆ ಹಾಕುವ ಮೂಲಕ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಸಹಕ ನೀಡಬೇಕೆಂದು ವಿನಂತಿ ಮಾಡಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಇದೆ ವೇಳೆ ನಗರಸಭೆ ಅಧ್ಯಕ್ಷ ಆರ್. ಮೋಹನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಎಂಸಿಇ ಕಾಲೇಜು ನೌಕರರ ಕಲ್ಯಾಣ ಸಂಘದ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಮಲೆನಾಡು ತಾಂತ್ರಿಕ ವಿದ್ಯಾಲಯದ ವಿದ್ಯರ್ಥಿಗಳು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಮಹಿಳಾ ಸಂಘ-ಸಂಸ್ಥೆಗಳು ಹಾಗೂ ಪರಿಸರ ಪ್ರೇಮಿಗಳು ಇತರರು ಇದ್ದರು.