ಹಾಸನ ಜಿಲ್ಲೆಯಲ್ಲಿ ಎರಡು ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ

Corona (1)
Published on

ಹಾಸನ: ಹಾಸನ ಜಿಲ್ಲೆಯಲ್ಲಿ ಎರಡು ಹೊಸ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಓರ್ವ ಮೆಡಿಕಲ್ ವಿದ್ಯಾರ್ಥಿ ಮತ್ತು 45 ವರ್ಷದ ಮಹಿಳೆಗೆ ಕರೋನಾ ಸೋಂಕು ದೃಢ ಪಟ್ಟಿದೆ.

ಗರ್ಭಕೋಶ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯಲ್ಲಿ ಕರೋನಾ ಪಾಸಿಟಿವ್ ಕಂಡುಬಂದಿದೆ. ಇನ್ನೊಂದೆಡೆ, ಬೆಂಗಳೂರಿಗೆ ತೆರಳಿ ವಾಪಸ್ ಬಂದಿದ್ದ ಮೆಡಿಕಲ್ ವಿದ್ಯಾರ್ಥಿಯೊಬ್ಬರಿಗೂ ಸೋಂಕು ದೃಢಪಟ್ಟಿದೆ. ಈ ವಿದ್ಯಾರ್ಥಿಗೆ ಟ್ರಾವೆಲ್ ಹಿಸ್ಟರಿ ಇದೆ ಎಂದು ತಿಳಿದುಬಂದಿದೆ.

ಪಾಸಿಟಿವ್ ವರದಿಯಾದ ಇಬ್ಬರಿಗೂ ಉಸಿರಾಟದ ತೊಂದರೆ ಅಥವಾ ಇತರ ಯಾವುದೇ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ. ಆರೋಗ್ಯ ಇಲಾಖೆಯು ಈ ಇಬ್ಬರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುತ್ತಿದ್ದು, ಸಂಪರ್ಕಿತರ ಪತ್ತೆ ಕಾರ್ಯವನ್ನು ಆರಂಭಿಸಿದೆ.

ಜಿಲ್ಲಾಡಳಿತವು ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರಲು ಮತ್ತು ಕರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net