

ಹೊಳೆನರಸೀಪುರ: ಹಾಸನ ಕ್ಷೇತ್ರದ ಶಾಸಕರು ವಿದ್ಯಾವಂತರೋ ಅಥವಾ ಅವಿದ್ಯಾವಂತರೋ ತಿಳಿಯುತ್ತಲ್ಲ. ಅವರ ಮಾತುಗಳು ಎಷ್ಟು ಸರಿನೊ ತಿಳಿಯುತ್ತಿಲ್ಲ ಎಲ್ಲ ಕೆಲಸಗಳನ್ನು ಅವರೇ ಮಾಡಿದ್ದು ಎಂದು ಹೇಳುತ್ತಾರೆ. ಹಾಸನ ಜಿಲ್ಲೆಯ ಅಭಿವೃದ್ಧಿ ಬಗ್ಗೆ ದಾರಿಯಲ್ಲಿ ಸಾಗುವ ಹುಡುಗನನ್ನು ಕೇಳಿದರೂ ರೇವಣ್ಣ ಮಾಡಿದ್ದು ಎಂದು ಹೇಳುವಾಗ ಇವರ ಮಾತುಗಳು ಎಷ್ಟು ಸರಿ ಎಂದು ಹೆಸರೇಳದೇ ಭವಾನಿ ರೇವಣ್ಣ ಶಾಸಕ ಪ್ರೀತಂ ಜೆ.ಗೌಡರ ವರ್ತನೆಯನ್ನು ಟೀಕಿಸಿದರು.
ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ತಾಲೂಕು ಕಂದಾಯ ಇಲಾಖೆ ವತಿಯಿಂದ ಫಲಾನುಭವಿಗಳಿಗೆ 94ಸಿ ರಡಿಯಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳ್ಳಿಮೈಸೂರು ಡಿಪಾರ್ಟ್‌ಮೆಂಟ್‌ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಹೆಂಡತಿ ಮಕ್ಕಳನ್ನು ಸಾಕಲಾರದೇ ನಮ್ಮ ಹತ್ತಿರ ಧಮಯ್ಯ ಧಕ್ಕಯ್ಯ ಅಂತಾ ಗೋಗರೆದು ಬೆಂಗಳೂರು ಬಿಬಿಎಂಪಿಗೆ ಹಾಕಿಸಿಕೊಂಡು ಕೆಲಸ ಮಾಡಿದ ಅವರ ಮಗ ಶಾಸಕನಾಗಿ ನಮ್ಮ ಬಗ್ಗೆ ಮಾತಾಡೊಕೆ ಬರ‌್ತಾನೆ ಎಂದು ರೇಗಿದರು.
ರೇವಣ್ಣ ಏಳನೇ ಕ್ಲಾಸ್ ಪಾಸ್ ಅಂತ ಹೇಳಿಕೊಂಡು ತಿರುತ್ತಾರೆ, ಐಎಎಸ್ ಅಧಿಕಾರಿ ಮಾಡುವ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಕೆಲಸ ಮಾಡೋಕೆ ಕ್ಲಾಸ್ ಏಕೆ ಬೇಕು ಎಂದು ಪ್ರಶ್ನಿಸಿದರು. ವರ್ಷದ 365 ದಿನಗಳಲ್ಲಿ 50 ದಿನಗಳು ಬೆಂಗಳೂರಲ್ಲಿ ಉಳಿಯಬಹುದು ಉಳಿಕೆ ದಿನಗಳಲ್ಲಿ ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ ಉಳಿಯುತ್ತಾರೆ ಎಂದು ಶಾಸಕ ಎಚ್.ಡಿ.ರೇವಣ್ಣನವರ ಕಾರ್ಯವನ್ನು ಶ್ಲಾಘಿಸಿದರು.
ತಾಲೂಕಿನಲ್ಲಿ 24 ಹಾಸ್ಟೆಲ್‌ಗಳು ಇದ್ದು, ಜೀವನ ನಿರ್ವಹಣೆಯಲ್ಲಿ ಬಹಳ ಕಷ್ಟದಲ್ಲಿರುವ ಹೆಣ್ಣುಮಕ್ಕಳನ್ನು ಕೆಲಸಕ್ಕೆ ಸೇರಿಸಿ, ಅವರ ಜೀವನಕ್ಕೆ ಸ್ವಲ್ಪ ಮಟ್ಟಿಗೆ ಸುಧಾರಣೆ ಮಾಡಲು ಅವಕಾಶ ಕಲ್ಪಸಿಲಾಗಿದೆ. ಇದೇ ರೀತಿ ಇತರೆ ಕ್ಷೇತ್ರಗಳಲ್ಲೂ ನೊಂದ ಮಹಿಳೆಯರಿಗೆ ಅವಕಾಶ ಮಾಡಲಾಗಿದೆ ಎಂದು ತಿಳಿಸಿ, ಕ್ಷೇತ್ರದ ಜನತೆಯ ಸಹಕಾರಕ್ಕೆ ಅಭಿನಂದಿಸಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕಂದಾಯ ಇಲಾಖೆ ವತಿಯಿಂದ ಫಲಾನುಭವಿಗಳಿಗೆ 94ಸಿ ರಡಿಯಲ್ಲಿ ಹಕ್ಕುಪತ್ರ ವಿತರಣೆ ಕುರಿತು ಮಾಹಿತಿ ಹಾಗೂ ವಿವಿಧ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಹಣ ಸೌಲಭ್ಯ ಹಾಗೂ ಇತರೆ ವಿಷಯಗಳು ಕುರಿತಂತೆ ಸವಿಸ್ತಾರವಾಗಿ ವಿವರಿಸಿದರು.
ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ತಾ.ಪಂ. ಇಒ ಯೋಗೇಶ್ ಪಿ.ಆರ್., ಗ್ರೇಡ್ 2 ತಹಸೀಲ್ದಾರ್ ರವಿ, ಉಪ ತಹಸೀಲ್ದಾರ್ ಶಿವಕುಮಾರ್ ಹಾಗೂ ಸೋಮಶೇಖರ್, ರಾಜಸ್ವ ನಿರೀಕ್ಷಕ ಸತೀಶ್, ಉದಯ್ ಕುಮಾರ್, ಕುಮಾರಸ್ವಾಮಿ, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ್ ಬಣಕರ್, ಪೃತ್ವಿ, ದರ್ಶನ್, ಗುರು ಹಾಗೂ ರಾಜೇಶ್ವರಿ, ಮುಕಂಡರಾದ ಮಂಜೇಗೌಡ, ಲಕ್ಕೂರು ಬಸವರಾಜು, ಇತರರು ಇದ್ದರು.