ಹಾಸನ: 172 ಪೊಲೀಸರ ವರ್ಗಾವಣೆ

Hassan SP Hariram Shankar
Published on

ಹಾಸನ: ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಅಧಿಕಾರ ವಹಿಸಿಕೊಂಡು ತಿಂಗಳು ತುಂಬುವ ಮೊದಲೇ ಇಲಾಖೆಯಲ್ಲಿ ಸುಧಾರಣೆ ತರಲು ಮುಂದಾಗಿದ್ದು, ಜಿಲ್ಲೆಯ 172 ಪೊಲೀಸ್ ಸಿಬ್ಬಂದಿಯನ್ನು ಒಂದೇ ದಿನ ವರ್ಗಾವಣೆ ಮಾಡುವ ಮೂಲಕ ಭರ್ಜರಿ ಸರ್ಜರಿ ಮಾಡಿದ್ದಾರೆ.


ಒಂದೇ ಠಾಣೆಯಲ್ಲಿ 5 ವರ್ಷಗಳಿಗಿಂತ ಹೆಚ್ಚಿನ ಕಾಲ ಸೇವೆ ಸಲ್ಲಿಸಿರುವ ಮತ್ತು ವ್ಯಾಪಕ ದೂರುಗಳು ಇರುವ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಈ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.


ಹರಿರಾಮ್ ಶಂಕರ್ ಅವರು ಅಧಿಕಾರ ವಹಿಸಿಕೊಂಡ ಮರುದಿನವೇ ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಪೊಲೀಸ್ ಇಲಾಖೆ ಅವ್ಯವಹಾರಗಳ ಕುರಿತು ಸಂಸದರು ಮತ್ತು ಶಾಸಕರು ಅಸಮಾಧಾನ ಹೊರಹಾಕಿದ್ದರು. ‘ಸಬ್ ಇನ್‌ಸ್ಪೆಕ್ಟರ್‌ಗಳ ಗಮನಕ್ಕೆ ಬಾರದಂತೆ ಅಪರಾಧ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಹಲವಾರು ವರ್ಷಗಳಿಂದ ಒಂದೇ ಠಾಣೆಯಲ್ಲಿ ಬೇರು ಬಿಟ್ಟಿರುವ ಪೇದೆಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರನ್ನು ತಕ್ಷಣ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಬೇಕು’ ಎಂಬುದಾಗಿ ಒತ್ತಾಯಿಸಿದ್ದರು.


ಸಾರ್ವಜನಿಕರಿಂದಲೂ ಈ ಕುರಿತು ವ್ಯಾಪಕ ದೂರುಗಳ ಬಂದ ಹಿನ್ನೆಲೆಯಲ್ಲಿ ನೂತನ ಎಸ್ಪಿ ಸಾಮೂಹಿಕ ವರ್ಗಾವಣೆ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net