ಹಾವೇರಿ ಜಿಲ್ಲೆಯಲ್ಲಿ ಮತ್ತೆ ವರುಣನ ಆರ್ಭಟ

IMG-20221011-WA0026
Published on

ಹಾವೇರಿ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಂಗಳವಾರ ಸಹ ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿತ್ತು.

ಹಾವೇರಿ‌ ನಗರ, ಹಾನಗಲ್, ರಾಣೆಬೆನ್ನೂರ, ಬ್ಯಾಡಗಿ, ಸವಣೂರ, ಗಣಜೂರು, ಕಳಸೂರು, ಅಗಡಿ, ಯಲಗಚ್ಚ, ಗಾಂಧಿಪುರ ಸೇರಿದಂತೆ ಹಲವೆಡೆ ಆರ್ಭಟಿಸುತ್ತಿರುವ ಮಳೆರಾಯ.

ತುಂಬಿ ಹರಿಯುತ್ತಿರುವ ಹಾವೇರಿ ತಾಲೂಕಿನ ಗಣಜೂರು ಗ್ರಾಮದ ಬಳಿ ಇರುವ ಹಳ್ಳ.

ಹಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಜನರ ಪರದಾಟ.

ಹಾವೇರಿಯಿಂದ ಗಣಜೂರು, ಕಳಸೂರು, ಕೋಳೂರು ಗ್ರಾಮಕ್ಕೆ ತೆರಳುವ ಜನರ ಪರದಾಟ.
ಹರಸಾಹಸಪಟ್ಟು ಹಳ್ಳದ ನೀರಿನಲ್ಲಿ ದಾಟಿದ ಜನರು.

ಸವಣೂರು ತಾಲೂಕಿನಲ್ಲಿ ಭರ್ಜರಿ ಮಳೆ ಸುರಿಯುತ್ತಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿದೆ.

ಸಂಜೆ ಆಗುತ್ತಿದ್ದಂತೆ ಶುರುವಾಗಿರೋ ಮಳೆರಾಯನ ಆರ್ಭಟ. ನಾಳೆಯೂ ಮುಂದುವರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net