ಹಾವೇರಿ ಜಿಲ್ಲೆಯಲ್ಲಿ 700ರ ಗಡಿದಾಟಿದ ಕರೊನಾ

25 BNK Seeldown
Published on

ಹಾವೇರಿ: ಜಿಲ್ಲೆಯಲ್ಲಿ ಶನಿವಾರ ಕೆಎಸ್​ಆರ್​ಟಿಸಿ ಹಾಗೂ ಆಟೋ ಚಾಲಕ ಸೇರಿ 52 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. 64 ಜನ ಗುಣವಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 712ಕ್ಕೇರಿದ್ದು, 237 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ 452 ಜನರು ಗುಣವಾಗಿ ಬಿಡುಗಡೆಗೊಂಡಿದ್ದರೆ, 23 ಜನ ಮೃತಪಟ್ಟಿದ್ದಾರೆ. ಹಾನಗಲ್ಲ ತಾಲೂಕಿನ 20, ಶಿಗ್ಗಾಂವಿ ತಾಲೂಕಿನ 18, ಹಾವೇರಿ 13, ರಾಣೆಬೆನ್ನೂರ 7, ಸವಣೂರ 4, ಹಿರೇಕೆರೂರ ತಾಲೂಕಿನ 2 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ. ಹಾನಗಲ್ಲ ತಾಲೂಕು ಹಿರೇಕೌಂಸಿ ಗ್ರಾಮದ 46 ವರ್ಷದ ಪುರುಷ, ಸವಣೂರ ತಾಲೂಕು ಹಿರೇಮುಗದೂರನ 78 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ರಾಣೆಬೆನ್ನೂರ ಶ್ರೀರಾಮನಗರದ 43 ವರ್ಷದ ಮಹಿಳೆ, ಉಮಾಶಂಕರ ನಗರದ 8 ವರ್ಷದ ಬಾಲಕಿ, 33 ವರ್ಷದ ಮಹಿಳೆ, 40 ವರ್ಷದ ಪುರುಷ, ಆಟೋ ಚಾಲಕನಾಗಿದ್ದ ಕೆಎಚ್​ಬಿ ಕಾಲನಿಯ 48 ವರ್ಷದ ಪುರುಷ, ಮಾರುತಿ ನಗರದ 39 ವರ್ಷದ ಮಹಿಳೆ, ಪೀರಜಾದೆ ನಗರದ 10 ವರ್ಷದ ಬಾಲಕ, ಸಿದ್ಧೇಶ್ವರ ನಗರದ 60 ವರ್ಷದ ವೃದ್ಧೆ, ಹುಗ್ಗಿ ಪೆಟ್ರೋಲ್ ಬಂಕ್ ಸಮೀಪದ 24 ವರ್ಷದ ಮಹಿಳೆ, 37 ವರ್ಷದ ಮಹಿಳೆ, 47 ವರ್ಷದ ಪುರುಷ, ಮೃತ್ಯುಂಜಯ ನಗರದ 41 ವರ್ಷದ ಪುರುಷ, ಇಟಗಿ ಗ್ರಾಮದ 35 ವರ್ಷದ ಪುರುಷ, 60 ವರ್ಷದ ವೃದ್ಧೆ, 65 ವರ್ಷದ ವೃದ್ಧೆ, ದೇವರಗುಡ್ಡ ಗ್ರಾಮದ 29 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ರಟ್ಟಿಹಳ್ಳಿಯ ತುಮ್ಮಿನಕಟ್ಟಿ ರಸ್ತೆಯಲ್ಲಿನ ಒಂದೇ ಕುಟುಂಬದವರಾದ 45 ವರ್ಷದ ಮಹಿಳೆ, 21 ವರ್ಷದ ಯುವತಿ, 40 ವರ್ಷದ ಮಹಿಳೆ, 42 ವರ್ಷದ ಪುರುಷ, 17 ವರ್ಷದ ಯುವತಿ, 49 ವರ್ಷದ ಪುರುಷ, 21 ವರ್ಷದ ಯುವತಿ, 12 ವರ್ಷದ ಬಾಲಕಿ, 43 ವರ್ಷದ ಮಹಿಳೆ, 65 ವರ್ಷದ ವೃದ್ಧೆ ಸೇರಿ 10 ಜನರಿಗೆ ಸೋಂಕು ತಗುಲಿದೆ. ದೂದಿಹಳ್ಳಿಯ ನಿವಾಸಿ ಚಾಮರಾಜನಗರದಲ್ಲಿ ಕೆಎಸ್​ಆರ್​ಟಿಸಿ ಚಾಲಕನಾಗಿದ್ದ 40 ವರ್ಷದ ಪುರುಷ, ಕೋಡ ಗ್ರಾಮದ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಹಾವೇರಿ ವಿದ್ಯಾನಗರ 3ನೇ ಕ್ರಾಸ್​ನಲ್ಲಿಯ 55 ವರ್ಷದ ಮಹಿಳೆ, ಪಿಬಿ ರಸ್ತೆಯಲ್ಲಿರುವ ಕಾವೇರಿ ಲಾಡ್ಜ್ ಎದುರಿನ ನಿವಾಸಿ 32 ವರ್ಷದ ಮಹಿಳೆ, ಇಜಾರಿಲಕಮಾಪುರದ 27 ವರ್ಷದ ಮಹಿಳೆ, ದ್ಯಾಮವ್ವನ ಗುಡಿ ಸಮೀಪದ 46 ವರ್ಷದ ಪುರುಷ, ಅಶ್ವಿನಿನಗರ 1ನೇ ಕ್ರಾಸ್​ನ 48 ವರ್ಷದ ಪುರುಷ, 3ನೇ ಕ್ರಾಸ್​ನ 54 ವರ್ಷದ ಪುರುಷ, ಮೇಲಿನಪೇಟೆಯ 40 ವರ್ಷದ ಪುರುಷ, ಪುರದ ಓಣಿಯ ಕಂದಕ ರೋಡನ ಬಳಿಯ 20 ವರ್ಷದ ಯುವತಿ, ಚಿಕ್ಕಲಿಂಗದಹಳ್ಳಿ ಗ್ರಾಮದ 27 ವರ್ಷದ ಮಹಿಳೆ, ಗುತ್ತಲದ 33 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಶಿಗ್ಗಾಂವಿ ತಾಲೂಕು ಬಂಕಾಪುರ ಸಿಂಪಿಗಲ್ಲಿಯ 65 ವರ್ಷದ ವೃದ್ಧೆ, 70 ವರ್ಷದ ವೃದ್ಧೆ, 76 ವರ್ಷದ ವೃದ್ಧ, ಸುಂಕದಕೇರಿಯ 42 ವರ್ಷದ ಪುರುಷ, ಬಸವನಾಳದ 27 ವರ್ಷದ ಪುರುಷ, ಸದಾಶಿವಪೇಟೆಯ 65 ವರ್ಷದ ವೃದ್ಧೆಗೆ ಸೋಂಕು ತಗುಲಿದೆ.

ಸವಣೂರ ಪಟ್ಟಣದ ಅಂಬೇಡ್ಕರ್ ನಗರದ 31 ವರ್ಷದ ಮಹಿಳೆ, 1 ವರ್ಷದ ಗಂಡುಮಗು, ತವರಮೆಳ್ಳಿಹಳ್ಳಿ ಗ್ರಾಮದ 40 ವರ್ಷದ ಮಹಿಳೆ, 15 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.

ಹಾನಗಲ್ಲ ತಾಲೂಕು ತಹಸೀಲ್ದಾರ್ ಕಚೇರಿ ಪಕ್ಕದ 32 ವರ್ಷದ ಪುರುಷ, ಬ್ಯಾಡಗಿ ಪಟ್ಟಣದ ಸುಭಾಸ ನಗರದ 28 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೊಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಇಬ್ಬರ ಸಾವು: ಹಾನಗಲ್ಲ ತಾಲೂಕು ಹಿರೇಕಾಂಶಿ ಗ್ರಾಮದ ಮಸ್ತಿನಗರದ 46 ವರ್ಷದ ಪುರುಷ ತೀವ್ರ ಉಸಿರಾಟ ತೊಂದರೆಯಿಂದ ಜು. 24ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟ. ಅದೇದಿನ ಮೂಗಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕು ದೃಢಪಟ್ಟಿದೆ. ಸವಣೂರ ತಾಲೂಕು ಹಿರೇಮುಗದೂರ ಗ್ರಾಮದ 78 ವರ್ಷದ ವೃದ್ಧನನ್ನು ಜ್ವರ ಮತ್ತು ತೀವ್ರ ಉಸಿರಾದ ತೊಂದರೆಯಿಂದ ಜು. 25ರಂದು ಜಿಲ್ಲಾಸ್ಪತ್ರೆ ಕರೆತರಲಾಗಿತ್ತು. ಅಂದೇ ಮೂಗಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅಂದೇ ಮೃತಪಟ್ಟಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿ ಪ್ರಕಾರ ನೆರವೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net