

ಹಾವೇರಿ: ಜಿಲ್ಲೆಯಲ್ಲಿ ಬುಧವಾರ 50 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 2 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ. ಈವರೆಗೆ 877 ಜನರಿಗೆ ಸೋಂಕು ಖಚಿತವಾಗಿದ್ದು, 503 ಜನರು ಸೋಂಕಿನಿಂದ ಗುಣವಾಗಿದ್ದಾರೆ. 25 ಜನರು ಮೃತಪಟ್ಟಿದ್ದಾರೆ. 350 ಪ್ರಕರಣಗಳು ಸಕ್ರಿಯವಾಗಿವೆ. ಬುಧವಾರ ಹಾವೇರಿ ಹಾಗೂ ಶಿಗ್ಗಾಂವಿ ತಾಲೂಕಿನ ತಲಾ ಒಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ.
ಪೊಲೀಸ್ ಪೇದೆ ಸಾವು...?: ನಾಲ್ಕು ದಿನಗಳ ಹಿಂದೆ ಕರೊನಾ ಸೋಂಕು ತಗುಲಿ ಚಿಕಿತ್ಸೆಗೆ ದಾಖಲಾಗಿದ್ದ ಹಿರೇಕೆರೂರ ಪೊಲೀಸ್ ಠಾಣೆಯ 51 ವರ್ಷದ ಪೇದೆಯೊಬ್ಬರು ಬುಧವಾರ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಆದರೆ, ಜಿಲ್ಲಾಡಳಿತ ಬಿಡುಗಡೆ ಗೊಳಿಸಿರುವ ಬುಲೆಟಿನ್ನಲ್ಲಿ ಸಾವಿನ ಬಗ್ಗೆ ನಮೂದಿಸಿಲ್ಲ. ಗುರುವಾರದ ಬುಲೆಟಿನ್ನಲ್ಲಿ ಪ್ರಕಟಗೊಳ್ಳಲಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಪಾಸಿಟಿವ್ ಪ್ರಕರಣಗಳು: ಹಾವೇರಿ ನಗರದ ಪುರದ ಓಣಿ, ಕೊಂಡವಾಡ ಗಲ್ಲಿ, ಇಜಾರಿಲಕಮಾಪುರ, ಕೆರಿಮತ್ತಿಹಳ್ಳಿಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್, ಕರ್ಜಗಿ ರಸ್ತೆ, ಬಸವೇಶ್ವರನಗರ ಎ ಬ್ಲಾಕ್ 13ನೇ ಕ್ರಾಸ್, ಮೇಲಿನಪೇಟೆ, ಅಶ್ವಿನಿ ನಗರ, ಜಿಲ್ಲಾಸ್ಪತ್ರೆ ವಸತಿಗೃಹ, ಶಿವಲಿಂಗೇಶ್ವರ ನಗರ ತಾಲೂಕಿನ ದೇವಗಿರಿ ಗ್ರಾಮ, ಕರ್ಜಗಿ ಗ್ರಾಮದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.
ಹಿರೇಕೆರೂರ ಪಟ್ಟಣದ ಕೆಎಚ್ಬಿ ಕಾಲನಿಯಲ್ಲಿ ಹಾಗೂ ವಿದ್ಯಾನಗರದಲ್ಲಿ ತಲಾ 2, ಪೊಲೀಸ್ ವಸತಿಗೃಹ, ಬಸವೇಶ್ವರ ನಗರ, ವಿಜಯನಗರ, ತಂಬಾಕದ ನಗರ, ಕೋಡ ಗ್ರಾಮ, ಮಾಸೂರ ಗ್ರಾಮ, ಹಂಸಬಾವಿ ಪೊಲೀಸ್ ವಸತಿಗೃಹದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಶಿಗ್ಗಾಂವಿ ಪಟ್ಟಣದ ಜಯನಗರ, ತಹಸೀಲ್ದಾರ್ ಕಚೇರಿಯಲ್ಲಿ ತಲಾ ಒಂದು, ಬಂಕಾಪುರ ಪಟ್ಟಣದಲ್ಲಿ 7 ಜನರಿಗೆ ಸೋಂಕು ದೃಢಪಟ್ಟಿದೆ.ರಾಣೆಬೆನ್ನೂರ ನಗರದ ಚರ್ಚ್ ಸಮೀಪ 2, ಸಿದ್ಧಾರೂಢ ನಗರ, ಅಶೋಕ ವೃತ್ತ, ಮಾರುತಿ ನಗರ, ವಿದ್ಯಾನಗರ ಹಾಗೂ ಕೋಣನತಂಬಿಗಿ ಗ್ರಾಮದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.
ಸವಣೂರ ಪಟ್ಟಣದಲ್ಲಿ 2, ತವರಮೆಳ್ಳಿಹಳ್ಳಿ ಗ್ರಾಮದಲ್ಲಿ 2, ಹಿರೇಮಳ್ಳಿಹಳ್ಳಿಯಲ್ಲಿ 1 ಪ್ರಕರಣ ದೃಢಪಟ್ಟಿದೆ. ಬ್ಯಾಡಗಿ ಪಟ್ಟಣದ ಸುಭಾಸ ನಗರದಲ್ಲಿ 1, ಕಾಗಿನೆಲೆ ಪೊಲೀಸ್ ವಸತಿಗೃಹದಲ್ಲಿ 2, ಬನ್ನಿಹಟ್ಟಿ ಗ್ರಾಮದಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಹಾನಗಲ್ಲ ಪಟ್ಟಣದ ವಿಜಯನಗರ, ಗುಂಡೂರ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.