ಹಾವೇರಿ ಜಿಲ್ಲೆಯಲ್ಲಿ 156 ಜನರಿಗೆ ಸೋಂಕು

carona logo
Published on

ಹಾವೇರಿ: ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು, ಆರೋಗ್ಯ, ಶಿಕ್ಷಣ, ಪೊಲೀಸ್ ಇಲಾಖೆ ಉದ್ಯೋಗಿಗಳು ಸೇರಿ ಜಿಲ್ಲೆಯಲ್ಲಿ ಬುಧವಾರ 156 ಜನರಿಗೆ ಕರೊನಾ ದೃಢಪಟ್ಟಿದೆ. 69 ಜನ ಗುಣವಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 4,637 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 3,161 ಜನ ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 115 ಜನ ಮೃತಪಟ್ಟಿದ್ದಾರೆ. 1,361 ಸಕ್ರಿಯ ಪ್ರಕರಣಗಳಿದ್ದು, 1,000 ಸೋಂಕಿತರು ಹೋಂ ಐಸೊಲೇಷನ್​ನಲ್ಲಿ ಹಾಗೂ 361 ಸೋಂಕಿತರು ಚಿಕಿತ್ಸೆಗೆ ದಾಖಲಾಗಿದ್ದಾರೆ.

ತಾಲೂಕುವಾರು ವಿವರ: ಹಾವೇರಿ ತಾಲೂಕಿನಲ್ಲಿ 55, ರಾಣೆಬೆನ್ನೂರ 29, ಬ್ಯಾಡಗಿ 23, ಹಿರೇಕೆರೂರ 21, ಶಿಗ್ಗಾಂವಿ 14, ಹಾನಗಲ್ಲ 9, ಸವಣೂರ ತಾಲೂಕಿನಲ್ಲಿ 3 ಹಾಗೂ ಧಾರವಾಡ ಹಾಗೂ ದಾವಣಗೆರೆ ಜಿಲ್ಲೆಯ ಇಬ್ಬರಿಗೆ ಬುಧವಾರ ಸೋಂಕು ದೃಢಪಟ್ಟಿದೆ.

ಗುಣವಾದವರು: ಸೋಂಕಿನಿಂದ ಗುಣವಾಗಿ ಹಿರೇಕೆರೂರ ತಾಲೂಕಿನ 30, ಬ್ಯಾಡಗಿ 2, ಹಾನಗಲ್ಲ 1, ಹಾವೇರಿ 26, ರಾಣೆಬೆನ್ನೂರ 2, ಸವಣೂರ ಹಾಗೂ ಶಿಗ್ಗಾಂವಿ ತಾಲೂಕಿನ ತಲಾ 4 ಜನರು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಮೂವರ ಸಾವು
ರಾಣೆಬೆನ್ನೂರ ಕನಕದಾಸ ನಗರದ 50 ವರ್ಷದ ಪುರುಷ, ಹಾನಗಲ್ಲ ಪಟ್ಟಣದ 80 ವರ್ಷದ ವೃದ್ಧ ಹಾಗೂ ಹಾನಗಲ್ಲ ತಾಲೂಕು ಬೊಮ್ಮನಹಳ್ಳಿಯ 81 ವರ್ಷದ ವೃದ್ಧೆ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net