ಹಾವು ಕಡಿದು ಯುವಕ ಮೃತ

ಹಾವು ಕಡಿದು ಯುವಕ ಮೃತ
Published on

ಚನ್ನರಾಯಪಟ್ಟಣ: ತೋಟದಲ್ಲಿ ತೆಂಗಿನ ಕಾಯಿಗಳನ್ನು ಒಂದೆಡೆಗೆ ಸಂಗ್ರಹಿಸುತಿದ್ದ ವೇಳೆ ಹಾವು ಕಡಿದು ಆಸ್ಪತ್ರೆ ಸೇರಿದ್ದ ಯುವಕ ಭಾನುವಾರ ಮಧ್ಯಾಹ್ನ ಸುಮಾರಿನಲ್ಲಿ ಮೃತಪಟ್ಟಿದ್ದಾನೆ.


ತಾಲೂಕಿನ ಹಿರೀಸಾವೆ ಹೋಬಳಿ ಪಿ.ಹೊಸಹಳ್ಳಿ ಗ್ರಾಮದ ಶಂಕರ್ ಎಂಬವರ ಮಗ ಎಚ್.ಎಸ್.ಪ್ರದೀಪ್ ಕುಮಾರ್(22) ಮೃತ ದುರ್ದೈವಿ.


ಕಳೆದ ನಾಲ್ಕು ದಿನಗಳ ಹಿಂದೆ ಪ್ರದೀಪ್ ಕುಮಾರ್ ತೋಟಕ್ಕೆ ತೆರಳಿದ್ದು ತೆಂಗಿನ ಕಾಯಿ ಒರುವ ಕೆಲಸ ಮಾಡುತ್ತಿದ್ದ ವೇಳೆ ಕಾಯಿಗಳ ನಡುವೆ ಇದ್ದ ಹಾವು ಕಡಿದಿದ್ದು ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.


ಚಿಕಿತ್ಸೆಗೆ ಸ್ಪಂದಿಸದ ಯುವಕ ಪ್ರದೀಪ್ ಕುಮಾರ್ ಭಾನುವಾರ ಮಧ್ಯಾಹ್ನ ಸುಮಾರಿನಲ್ಲಿ ಕೊನೆಯುಸಿರೆಳೆದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net