ಹಾವು ಕಚ್ಚಿ ರೈತ ಮಹಿಳೆ ಸಾವು

ನರಸಮ್ಮ
Published on

ಚಿಂಚೋಳಿ: ಹಾವು ಕಚ್ಚಿ ರೈತ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ಹೊಡೆಬೀರನಳ್ಳಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ನರಸಮ್ಮ ನರಸಪ್ಪ (35) ಮೃತ ಮಹಿಳೆ. ಕೂಲಿ ಕೆಲಸಕ್ಕಾಗಿ ಹೊಲಕ್ಕೆ ಹೋಗಿದ್ದು, ಸಂಜೆ ಸಮಯದಲ್ಲಿ ಹಾವು ಕಚ್ಚಿದೆ. ಆದರೆ ಗೊತ್ತಾಗಿಲ್ಲ ಮನೆಗೆ ವಾಪಸ್ ಆಗುವಾಗ ಸುಸ್ತಾಗಿದ್ದು, ಕೂಡಲೇ ಸುಲೇಪೇಟ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಚಿಂಚೋಳಿಗೆ ಕಳಿಸಿದ್ದು, ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾಳೆ.

ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net